ತೆಲಂಗಾಣ : ಇತ್ತೀಚಿಗೆ ವಯಸ್ಸಿನ ಅಂತರವಿಲ್ಲದೆ ಎಲ್ಲರಲ್ಲೂ ಹೃದಯಘಾತ ಎನ್ನುವುದು ಸಾಮಾನ್ಯವಾಗಿ ಬಿಟ್ಟಿದೆ. ಇದೀಗ ಮಗಳ ಮದುವೆ ಸಂದರ್ಭದಲ್ಲಿ ಅಳಿಯನ ಪಾದ ತೊಳೆದು ಕನ್ಯಾದಾನ ಮಾಡುವಾಗಲೇ, ಹೃದಯಾಘಾತದಿಂದ ಮಾವ ಸಾವನಪ್ಪಿರುವ ಘಟನೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಭಿಕ್ಕನೂರ್ ಮಂಡಲದ ರಾಮೇಶ್ವರಪಲ್ಲಿಯಲ್ಲಿ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಮೃತರನ್ನು ಕುಡಿಕ್ಯಾಲ ಬಾಲಚಂದ್ರಂ (56) ಎಂದು ತಿಳಿದುಬಂದಿದ್ದು, ಇವರು ಮಗಳ ಮದುವೆ ನಡೆಯುತ್ತಿದ್ದಾಗ, ತಂದೆ ಅದೇ ಸಭಾಂಗಣದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ಪ್ರಾಣ ಬಿಟ್ಟಿರುವ ಘಟನೆ ನಡೆದಿದೆ.ಕನ್ಯಾದಾನ ಸಮಾರಂಭ ಮುಗಿದ ತಕ್ಷಣ, ವಧುವಿನ ತಂದೆಗೆ ಹೃದಯಾಘಾತವಾಯಿತು.ತಕ್ಷಣ ಎಚ್ಚೆತ್ತ ಕುಟುಂಬ ಸದಸ್ಯರು ಅವರನ್ನು ಆಸ್ಪತ್ರೆಗೆ ಸಾಗಿಸಿದರು, ಅಲ್ಲಿ ಅವರು ಈಗಾಗಲೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ದೃಢಪಡಿಸಿದರು.
ನಿನ್ನೆ ಜಂಗಂಪಳ್ಳಿಯ ಹೊರವಲಯದಲ್ಲಿರುವ ಬಿಟಿಎಸ್ ಬಳಿಯ ಮದುವೆ ಮಂಟಪದಲ್ಲಿ ಏರ್ಪಡಿಸಿದ್ದರು. ಈ ಭವ್ಯ ಸಮಾರಂಭದಲ್ಲಿ ಎಲ್ಲಾ ಸಂಬಂಧಿಕರು ಮತ್ತು ಸ್ನೇಹಿತರು ಭಾಗವಹಿಸಿದ್ದರು. ವರನ ಪಾದಗಳನ್ನು ತೊಳೆದು ಕನ್ಯಾದಾನ ಮಾಡಿದ ನಂತರ, ಬಾಲಚಂದ್ರ ತೀವ್ರ ಅಸ್ವಸ್ಥನಾಗಿ ಮದುವೆ ಮಂಟಪದಲ್ಲಿ ಕುಸಿದು ಬಿದ್ದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ದರು ಸಹ ಬದುಕುಳಿಯಲಿಲ್ಲ.