ಕಲಬುರಗಿ : ರಾಶಿ ಮಾಡುವ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬಳು ಮೃತಪಟ್ಟಿರುವ ಘಟನೆ ಆಳಂದ ತಾಲೂಕಿನ ಮುದ್ದಡಗಾ ಗ್ರಾಮದ ಹೊರ ವಲಯದಲ್ಲಿ ಸಂಭವಿಸಿದೆ. ಮುದ್ದಡಗಾ ಗ್ರಾಮದ ನಿವಾಸಿ ಗಂಗಮ್ಮ ಸುಧಾಕರ ಹಾಗರಗಿ (40) ಮೃತ ಮಹಿಳೆ ಎಂದು ಗುರುತಿಸಲಾಗಿದೆ.
ಯಂತ್ರದಲ್ಲಿ ಸೋಯಾಬಿನ್ ಹಾಕುವಾಗ ಮೈ ಮೇಲಿನ ಸೀರೆ ಯಂತ್ರಕ್ಕೆ ಸಿಲುಕಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಈ ಕುರಿತು ಮೃತಳ ಪತಿ ಸುಧಾಕರ್ ಅವರು ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.








