ಬಾಗಲಕೋಟೆ : ಇತ್ತೀಚಿಗೆ ಯುವಜನತೆಯಲ್ಲಿ ಹೃದಯಾಘಾತ ಎನ್ನುವುದು ಬಹಳವಾಗಿ ಕಾಡುತ್ತಿದೆ. ರಾಜ್ಯದಲ್ಲಿ ಕಳೆದ ಒಂದು ವಾರದಲ್ಲಿ ಐವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಇದೀಗ ಬಾಗಲಕೋಟೆ ಜಿಲ್ಲೆ ಮೂಲದ ಯೋಧರೊಬ್ಬರು, ಚಂಡಿಘಡ ನಲ್ಲಿ ಸೇನಾ ತರಬೇತಿ ಪಡೆಯುವ ವೇಳೆ ಹೃದಯಾಘಾತದಿಂದ ಸಾವನಪ್ಪಿರುವ ಘಟನೆ ವರದಿಯಾಗಿದೆ.
ಹೌದು ಚಿಂಚಲಕಟ್ಟಿ ಎಲ್ಎಟಿ ಗ್ರಾಮದ ಯೋಧ ಉಪೇಂದ್ರ ಸೋಮನಾಥ ರಾಠೋಡ (23) ಬುಧವಾರ ಸೇನಾ ತರಬೇತಿ ವೇಳೆ ಹೃದಯಾಘಾತದಿಂದ ಚಂಡೀಗಢದಲ್ಲಿ ಮೃತಪಟ್ಟಿದ್ದಾರೆ. ಕಳೆದ ಮಾರ್ಚ್ನಲ್ಲಿ ಅಸ್ಸಾಂ ರೈಫಲ್ಸ್ನಲ್ಲಿ ಸೇನೆಗೆ ಆಯ್ಕೆಯಾಗಿದ್ದ ಉಪೇಂದ್ರ, ಮೂರು ತಿಂಗಳಿನಿಂದ ಚಂಡೀಗಢದಲ್ಲಿ ಸೇನಾ ತರಬೇತಿ ಪಡೆಯುತ್ತಿದ್ದರು. ಕಳೆದ ಬುಧವಾರ ತರಬೇತಿ ವೇಳೆ ಸೋಮನಾಥ ಅವರಿಗೆ ಹೃದಯಘಾತ ಸಂಭವಿಸಿ ಸಾವನಪ್ಪಿದ್ದಾರೆ. ಇಂದು ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಆಗಮಿಸಲಿದ್ದು, ಅಂತ್ಯಕ್ರಿಯೆ ನೆರವೇರಲಿದೆ.