ಉಡುಪಿ : ಇತ್ತೀಚಿಗೆ ಹೃದಯಾಘಾತ ಎನ್ನುವುದು ಸಹಜ ಕಾಯಿಲೆ ಎಂಬಂತಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಕೂಡ ಈ ಒಂದು ಹೃದಯಘಾತ ಕಾಯಿಲೆ ಸಾಮಾನ್ಯವಾಗಿದೆ. ದಿಗ ಉಡುಪಿ ಜಿಲ್ಲೆಯ ಪಡುಬಿದರೆಯಲ್ಲಿ ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹಠಾತ್ ಹೃದಯಾಘಾತವಾಗಿದೆ. ತಕ್ಷಣ ಬಸ್ ಅನ್ನೋ ರಸ್ತೆ ಪಕ್ಕ ಇಳಿಜಾರಿಗೆ ಇಳಿಸಿ ಪ್ರಯಾಣಿಕರ ಪ್ರಾಣ ಚಾಲಕ ಕಾಪಾಡಿದ್ದಾನೆ.
ತೆಂಕ ಎರ್ಮಾಳಿನ ಮಸೀದಿ ಬಳಿ ಉಡುಪಿಯತ್ತ ಹೋಗುತ್ತಿದ್ದ ತಡೆರಹಿತ ಬಸ್ ನ ಚಾಲ ಕ ಶಂಭು ಎಂಬವರಿಗೆ ಹಠಾತ್ ಎದೆನೋವು ಕಾಣಿಸಿಕೊಂಡು ಬಸ್ ಹೆದ್ದಾರಿ ಪಕ್ಕದ ಇಳಿಜಾರಿಗಿಳಿದು ನಿಂತ ಘಟನೆ ಇಂದು ಬೆಳಿಗ್ಗೆ ನಡೆದಿದೆ.ಕೂಡಲೇ ಬಸ್ ಚಾಲಕ ಹಾಗೂ ಗಾಯಗೊಂಡಿದ್ದ ಕೆಲ ಪ್ರಯಾಣಿಕರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.