ಬೆಂಗಳೂರು : ಗೂಗಲ್ ಮ್ಯಾಪ್ ಬಳಸಿ ಇತ್ತೀಚಿಗೆ ಅದೆಷ್ಟು ಅಪಘಾತಗಳು ಸಂಭವಿಸುತ್ತಿದ್ದು ಕೆಲವರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಕೂಡ ಅಂತಹ ಘಟನೆ ನಡೆದಿದ್ದು, ವೈದ್ಯರೊಬ್ಬರು ಗೂಗಲ್ ಮ್ಯಾಪ್ ನಲ್ಲಿ ಮಗ್ನರಾಗಿ ವೇಗವಾಗಿ ಕಾರು ಚಾಲನೆ ಮಾಡುತ್ತ ರಸ್ತೆ ಬದಿಯಲ್ಲಿ ನಿಂತಿದ್ದ ಕ್ಯಾಂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಮೃತ ವೈದ್ಯನನ್ನು ಹೈದ್ರಾಬಾದ್ ಮೂಲದ ಅಮರ್ ಪ್ರಸಾದ ಎಂದು ಗುರುತಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಬಳಿಯ ರಾಷ್ಟ್ರೀಯ ಹೆದ್ದಾರಿ 648 ರಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಗೂಗಲ್ ಮ್ಯಾಪ್ ಮಗ್ನನಾಗಿದ್ದ ಕಾರು ಚಾಲಕ ವೇಗವಾಗಿ ಹೋಗಿ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಕಾರಿನಲ್ಲಿ ವೈದ್ಯ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾನೆ.
ಹೈದ್ರಾಬಾದ್ ಮೂಲದ ಅಮರ್ ಪ್ರಸಾದ್, ವೇಣು ಮತ್ತು ಪ್ರವಳಿಕಾ ಅನ್ನೋ ಮೂವರು ಸ್ನೇಹಿತರು ತಮಿಳುನಾಡಿನ ಪಳನಿ ದೇವಸ್ಥಾನಕ್ಕೆ ಹೋಗಬೇಕು ಎಂದು ಕಾರು ಏರಿದ್ದಾರೆ . ಬೆಳಗಿನಜಾವ 2 ಗಂಟೆಗೆ ಹೈದ್ರಾಬಾದ್ನಿಂದ ಹೊರಟವರು, ಬೆಳಗ್ಗೆ 10 ಗಂಟೆ ಹೊತ್ತಿಗೆ ಹೊಸಕೋಟೆ ಬಳಿ ಬಂದಿದ್ದರು.
ಈ ವೇಳೆ ಗೂಗಲ್ ಮ್ಯಾಪ್ ನೋಡುತ್ತ ಕಾರು ಚಾಲನೆ ಮಾಡಿದ ಚಾಲಕ, ಮ್ಯಾಪ್ನತ್ತಲೇ ಹೆಚ್ಚು ಗಮನಹರಿಸಿದ್ದಾನೆ. ಇದರಿಂದ ನೋಡ ನೋಡುತ್ತಿದ್ದಂತೆಯೇ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಕಾರ್ನ ಹಿಂಭಾಗದಲ್ಲಿ ಕೂತಿದ್ದ ಹೈದರಾಬಾದ್ ಮೂಲದ ವೈದ್ಯ ಅಮರ್ ಪ್ರಸಾದ್ ಸ್ಥಳದಲ್ಲೆ ಸಾವನ್ನಪಿದ್ದಾನೆ. ಇನ್ನುಳಿದ ಇಬ್ಬರನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.