ಕಲಬುರ್ಗಿ : ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ನಾಲವಾರದ ಕೋರಿಸಿದ್ದೇಶ್ವರ ಸಂಸ್ಥಾನ ಮಠದಲ್ಲಿ ಭತ್ತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ.
ಚಿತಾಪುರ ತಾಲೂಕಿನ ನಾಲವಾರದ ಶ್ರೀ ಕೋರಿಸಿದ್ದೇಶ್ವರ ಮಠದಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಮಲ್ಲಿಕಾರ್ಜುನ ವೀರಯ್ಯಸ್ವಾಮಿ ಹಿರೇಮಠ (35) ಆತ್ಮಹತ್ಯೆ ಮಾಡಿಕೊಂಡ ಭಕ್ತ ಎಂದು ತಿಳಿದುಬಂದಿದೆ. ವೀರಯ್ಯಸ್ವಾಮಿ ಮಠದ ಪೀಠಾಧಿಪತಿ ತೋಟೇಂದ್ರ ಶಿವಾಚಾರ್ಯ ಅವರ ತಂಗಿಯ ಪುತ್ರ ಎನ್ನಲಾಗಿದ್ದು, ಒಂದು ವರ್ಷದ ಹಿಂದೆ ಅವರಿಗೆ ಮದುವೆಯಾಗಿತ್ತು.
ಪೂಜ್ಯರ ಸೇವೆ ಮಾಡುತ್ತ ಮಠದಲ್ಲೇ ವಾಸವಿದ್ದರು ಎಂದು ತಿಳಿದುಬಂದಿದೆ.ಮಠದಲ್ಲಿರುವ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಚಿತ್ತಾಪೂರ ಹಣೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.