ಆಗ್ರಾ : ಬೀದಿ ನಾಯಿಗಳ ಅಟ್ಟಹಾಸ ಮುಂದುವರೆದಿದ್ದು, ವಾಕಿಂಗ್ ಗೆ ಹೋಗಿದ್ದ ಮಹಿಳೆ ಮೇಲೆ ನಡುರಸ್ತೆಯಲ್ಲೇ 8 ಕ್ಕೂ ಹೆಚ್ಚು ಬೀದಿ ನಾಯಿಗಳು ದಾಳಿ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ.
ಉತ್ತರ ಪ್ರದೇಶದ ಆಗ್ರಾದಲ್ಲಿ ಈ ಘಟನೆ ನಡೆದಿದೆ. ಇಲ್ಲಿ ವಾಕಿಂಗ್‌ಗೆ ತೆರಳಿದ್ದ ಮಹಿಳೆ ಮೇಲೆ ಎಂಟು ನಾಯಿಗಳ ದಂಡು ದಾಳಿ ಮಾಡಿದೆ. ಮಹಿಳೆ ಕೈಯಲ್ಲಿ ನಾಯಿಗಳನ್ನು ಓಡಿಸಿ ತನ್ನನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಳೆ. ಆದರೆ ನಾಯಿಗಳ ದಂಡು ಆಕೆಯ ಮೇಲೆ ದಾಳಿ ಮಾಡಿದೆ. ಮಹಿಳೆ ಕಿರುಚುತ್ತಾ ನೆಲದ ಮೇಲೆ ಬೀಳುತ್ತಾಳೆ ಮತ್ತು ನಾಯಿಗಳು ಅವಳ ಬಟ್ಟೆಗಳನ್ನು ಹಲ್ಲುಗಳಿಂದ ಎಳೆದುಕೊಂಡು ಖಾಲಿ ಜಾಗಕ್ಕೆ ಕರೆದೊಯ್ಯುತ್ತವೆ.
ಆಗ್ರಾದ ಈದ್ಗಾ ಕಾಲೋನಿಯಲ್ಲಿ ಬೆಳಗ್ಗೆ 8:30ರ ಸುಮಾರಿಗೆ ಮಹಿಳೆ ಮನೆಯಿಂದ ವಾಕಿಂಗ್ ಹೋಗಿದ್ದರು. ದಾರಿಯಲ್ಲಿ ಕಂಡು ಬಂದ ಬೀದಿ ನಾಯಿಗಳ ದಂಡು ಅವಳನ್ನು ಸುತ್ತುವರೆದಿತ್ತು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
⛔️ Horrible cctv footage from Agra!
Stray dogs attacked an old lady ruthlessly. She was injured but was later rescued by people around!
When will we tackle this stray dog menace issue??? pic.twitter.com/kdVtSu5AeA
— Keh Ke Peheno (@coolfunnytshirt) December 24, 2024