ಕೋಲಾರ : ಕೋಲಾರದಲ್ಲಿ ಘೋರ ಘಟನೆ ನಡೆದಿದ್ದು, ಶಾಲೆ ಆವರಣದಲ್ಲಿದ್ದ ಸಂಪ್ ನಲ್ಲಿ ವಿದ್ಯಾರ್ಥಿ ಬಿದ್ದು ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕಡದನಹಳ್ಳಿಯಲ್ಲಿ ಈ ಒಂದು ಘಟನೆ ಸಂಭವಿಸಿದೆ. ಸಂಪನಲ್ಲಿ 3ನೇ ತರಗತಿ ವಿದ್ಯಾರ್ಥಿ ನರೇಂದ್ರ (9) ವಿದ್ಯಾರ್ಥಿಯ ಮೃತ ದೇಹ ಪತ್ತೆ ಆಗಿದೆ.
ನರೇಂದ್ರ ಕಡದನಹಳ್ಳಿಯ ಸರ್ಕಾರಿ ಪ್ರಾರ್ಥಮಿಕ ಶಾಲೆಯ 3ನೇ ತರಗತಿ ವಿದ್ಯಾರ್ಥಿಯಾಗಿದ್ದು, ಬೆಳಿಗ್ಗೆ ವಿದ್ಯಾರ್ಥಿ ನರೇಂದ್ರ ಶಾಲೆಗೆ ಬಂದಿದ್ದ ಅದಾದ ಬಳಿಕ ಆತ ನಾಪತ್ತೆಯಾಗಿದ್ದ ವಿದ್ಯಾರ್ಥಿ ನರೇಂದ್ರಗಾಗಿ ಪೋಷಕರು ಗ್ರಾಮದ ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ಬಳಿಕ ಶಾಲೆಯ ಆವರಣದಲ್ಲಿದ್ದ ಸಂಪ್ನಲ್ಲಿ ವಿದ್ಯಾರ್ಥಿ ಮೃತ ದೇಹ ಪತ್ತೆಯಾಗಿದೆ ಮಾಸ್ತಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.








