ಕೊಡಗು : ಇನ್ನೇನು ಕೆಲವೇ ತಿಂಗಳಲ್ಲಿ ಆಹಾರ ಇಲಾಖೆಯಲ್ಲಿ ಸೇವಿ ಸಲ್ಲಿಸುತ್ತಿದ್ದ ವ್ಯಕ್ತಿ ಒಬ್ಬರು ನಿವೃತ್ತಿಯಾಗುವ ಸಮಯದಲ್ಲಿ ತೀರ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದಿದೆ.
ಹೌದು ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಹೃದಯಾಘಾತದಿಂದ ಆಹಾರ ಇಲಾಖೆಯ ಡಿಡಿ ಸಾವನಪ್ಪಿದ್ದಾರೆ. ಕಚೇರಿಗೆ ತೆರಳುವಾಗ ಶ್ರೀಧರ್ಮೂರ್ತಿ (59) ಎನ್ನುವವರು ಕೊನೆಯುಸಿರೆಳೆದಿದ್ದಾರೆ. ಶ್ರೀಧರ್ ಮೂರ್ತಿ ಕೆಲವೇ ತಿಂಗಳಲ್ಲಿ ನಿವೃತ್ತಿಯಾಗುವವರಿದ್ದರು. ಇದೇ ವೇಳೆ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದು, ಕುಟುಂಬಸ್ಥರಲ್ಲಿ ಶೋಕ ಮಡುಗಟ್ಟಿದೆ.