ಇಂದಿನ ಡಿಜಿಟಲ್ ಯುಗದಲ್ಲಿ ಸೈಬರ್ ಬೆದರಿಕೆಗಳು ಕೇವಲ ಬ್ಯಾಂಕ್ ಖಾತೆ ಅಥವಾ ಡೇಟಾ ಕಳ್ಳತನಕ್ಕೆ ಸೀಮಿತವಾಗಿಲ್ಲ; ಅವು ಈಗ ನೇರವಾಗಿ ಮನುಷ್ಯನ ಪ್ರಾಣಕ್ಕೇ ಅಪಾಯವನ್ನುಂಟುಮಾಡುವ ಮಟ್ಟಕ್ಕೆ ಬೆಳೆದಿವೆ ಎಂದು ಪ್ರಖ್ಯಾತ ಸಲಹಾ ಸಂಸ್ಥೆ ‘ಡೆಲಾಯ್ಟ್’ (Deloitte) ನ ಸೈಬರ್ ಸುರಕ್ಷತಾ ತಜ್ಞರು ಎಚ್ಚರಿಸಿದ್ದಾರೆ.
ಆಸ್ಪತ್ರೆಗಳ ಮೇಲೆ ನಡೆಯುವ ಸೈಬರ್ ದಾಳಿಗಳಿಂದ ವೆಂಟಿಲೇಟರ್ಗಳು, ಐಸಿಯು (ICU) ಉಪಕರಣಗಳು ಮತ್ತು ಶಸ್ತ್ರಚಿಕಿತ್ಸಾ ರೋಬೋಟ್ಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿ ರೋಗಿಗಳ ಜೀವಕ್ಕೆ ಅಪಾಯವಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ.ನಗರಗಳ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ, ವಿದ್ಯುತ್ ಗ್ರಿಡ್ಗಳು ಮತ್ತು ಸಾರಿಗೆ ವ್ಯವಸ್ಥೆಯ ಮೇಲೆ ಸೈಬರ್ ದಾಳಿ ನಡೆದರೆ, ಅದು ಭಾರಿ ಅಪಘಾತಗಳಿಗೆ ಮತ್ತು ನಾಗರಿಕರ ಸಾವಿಗೆ ಕಾರಣವಾಗಬಹುದು.
ಸ್ಮಾರ್ಟ್ ಕಾರುಗಳು ಮತ್ತು ಸ್ವಯಂಚಾಲಿತ ವಾಹನಗಳ ಸಾಫ್ಟ್ವೇರ್ ಹ್ಯಾಕ್ ಮಾಡುವ ಮೂಲಕ ಸಂಚಾರಿ ವ್ಯವಸ್ಥೆಯನ್ನು ಬುಡಮೇಲು ಮಾಡುವ ಸಾಧ್ಯತೆ ಇದೆ ಎಂದು ಡೆಲಾಯ್ಟ್ ಎಚ್ಚರಿಸಿದೆ.ಸ್ಮಾರ್ಟ್ ಹೋಮ್ ಸಾಧನಗಳು ಮತ್ತು ವೈಯಕ್ತಿಕ ಗ್ಯಾಜೆಟ್ಗಳ ಮೂಲಕ ಹ್ಯಾಕರ್ಗಳು ವ್ಯಕ್ತಿಗಳ ಚಲನವಲನದ ಮೇಲೆ ನಿಗಾ ಇಟ್ಟು ಭೌತಿಕ ಹಾನಿ ಎಸಗುವ ಆತಂಕವೂ ಇದೆ.








