ಬಳ್ಳಾರಿ : ರಾಜ್ಯದಲ್ಲಿ ಹೃದಯಾಘಾತದಿಂದ ಸರಣಿ ಸಾವು ಮುಂದುವರೆದಿದ್ದು, ಇಂದು ಬೆಳಿಗ್ಗೆ ತಾನೇ ಕಲ್ಬುರ್ಗಿಯಲ್ಲಿ ವಾಕಿಂಗ್ ಗೆ ತೆರಳಿ ಮನೆಗೆ ಬಂದಿದ್ದ ಉಪ ಪ್ರಾಂಶುಪಾಲರು ಒಬ್ಬರು ಹೃದಯಘಾತಕೆ ಹುಲಿಯಾಗಿದ್ದರು ಇದೀಗ ಬಳ್ಳಾರಿಯಲ್ಲಿ ಹಾರ್ಟ್ ಅಟ್ಯಾಕ್ ಗೆ ಯುವಕನೊಬ್ಬ ಸಾವನಪ್ಪಿದ್ದಾನೆ.
ಹೌದು ಬಳ್ಳಾರಿ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಯುವಕ ಬಲಿಯಾಗಿದ್ದಾನೆ. ಜಿಲ್ಲೆಯ ಕಂಪ್ಲಿ ತಾಲೂಕಿನ ಸಣಾಪುರ ಗ್ರಾಮದ ವಿ.ಗವಿಸಿದ್ದ (30) ಎನ್ನುವ ಯುವಕ ಸಾವನಪ್ಪಿದ್ದಾನೆ. ಕಳೆದ 5 ದಿನಗಳ ಹಿಂದೆ ಗವಿಸಿದ್ದನಿಗೆ ಹೃದಯಘಾತವಾಗಿತ್ತು. ಬಳ್ಳಾರಿ ಖಾಸಗಿ ಆಸ್ಪತ್ರೆಯಲ್ಲಿ ಗವಿಸಿದ್ದ ಚಿಕಿತ್ಸೆ ಕೂಡ ಪಡೆಯುತ್ತಿದ್ದ. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ವಿ.ಗವಿಸಿದ್ದ ಇದೀಗ ಮೃತಪಟ್ಟಿದ್ದಾನೆ.