ಕೋಲಾರ : ಚಾಕ್ಲೆಟ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ ಚಿಕ್ಕ ಮಕ್ಕಳಿಂದ ಹಿಡಿದು, ಯುವಕ ಯುವತಿಯರಿಗೆ ಚಾಕ್ಲೇಟ್ ಅಂದರೆ ಅಚ್ಚುಮೆಚ್ಚು. ಆದರೆ ಇದೀಗ ಚಾಕಲೇಟ್ ನಲ್ಲಿ ಮನುಷ್ಯನ ಹಲ್ಲು ಪತ್ತೆಯಾದ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ನಡೆದಿದೆ.
ಹೌದು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದ ಭಾರತೀ ಎಂಬುವವರು ಅಂಗಡಿಯೊಂದರಲ್ಲಿ ಟೂಟಿ ಫ್ರೂಟಿ ಎಂಬ ಚಾಕ್ಲೇಟ್ ಅನ್ನು ಖರೀದಿಸಿದ್ದರು. ಚಾಕ್ಲೆಟ್ ತಿನ್ನುವಾಗ ಅದರಲ್ಲಿ ಮನುಷ್ಯನ ಹಲ್ಲು ಪತ್ತೆಯಾಗಿದ್ದು ಆತಂಕ ಮೂಡಿಸಿದೆ.