ಕೆಎನ್ಎನ್ಡಿಜಿಟಲ್ ಡೆಸ್ಕ್ ; ಕೆಫೆ ಮಾಲೀಕರೊಬ್ಬರು ಇತ್ತೀಚೆಗೆ ತಮ್ಮ ಮಹಿಳಾ ಸಿಬ್ಬಂದಿಗೆ ಸಂಬಂಧಿಸಿದ ವಿಲಕ್ಷಣ ಹೇಳಿಕೆಯೊಂದನ್ನು ನೀಡಿದ್ದಾರೆ. ʻಮಹಿಳಾ ಸಿಬ್ಬಂದಿಯು ತಮ್ಮ ಋತುಚಕ್ರ(period)ದ ಸಮಯದಲ್ಲಿ ಕೆಂಪು ಬಣ್ಣದ ಸ್ಟಿಕ್ಕರ್(red sticker) ಧರಿಸಬೇಕುʼ ಮಾಲೀಕ ಹೇಳಿಕೊಂಡಿದ್ದಾನೆ.
ಆಂಟನಿ ಎಂದು ಗುರುತಿಸಲಾದ ಆಸ್ಟ್ರೇಲಿಯಾದ ಮಾಲೀಕ ಕೈಲ್ ಮತ್ತು ಜಾಕಿ ಓ ಶೋನಲ್ಲಿ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ. “ಭಾವನಾತ್ಮಕವಾಗಿ ಒತ್ತಡಕ್ಕೊಳಗಾದ ಮತ್ತು ಋತುಚಕ್ರದ ಸಮಯದಲ್ಲಿ ಮಹಿಳೆಯರು ಸಮಸ್ಯೆಗಳನ್ನು ಎದುರಿಸುತ್ತಾರೆ. ಇಂತಹ ಘಟನೆಯನ್ನು ನಾನು ನನ್ನ ಕೆಫೆಯ ಇಬ್ಬರು ಸಿಬ್ಬಂದಿಗಳಲ್ಲಿ ನೋಡಿದ್ದೇನೆ. ಮಹಿಳಾ ಸಿಬ್ಬಂದಿ ಈಂತಹ ಅವಧಿಯಲ್ಲಿ ಈ ಟ್ಯಾಗ್ಅನ್ನು ಧರಿಸಬೇಕೆಂದು ನಿರ್ಧರಿಸಿದೆ. ಇದರಿಂದ ಬೇರೆಯವರಿಗೆ ತಿಳುವಳಿಕೆ ಹಾಗೂ ಸಿಬ್ಬಂದಿಯ ಕಷ್ಟ ತಿಳಿಯಬಹುದು. ಹುಡುಗರಿಗೆ ಈ ಬಗ್ಗೆ ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ಆದ್ದರಿಂದ ಅದನ್ನು ತಪ್ಪಿಸಲು ಮಹಿಳಾ ಸಿಬ್ಬಂದಿಗಳು ಋತುಚಕ್ರದ ಸಮಯದಲ್ಲಿ ಕೆಂಪು ಸ್ಟಿಕ್ಕರ್ ಅನ್ನು ಧರಿಸುವುದು ಒಳ್ಳೆಯದು ಎಂದು ನಾವು ಭಾವಿಸಿದ್ದೇವೆ ಎಂದಿದ್ದಾರೆ.
ಆಂಟನಿ ಹೇಳಿಕೆಗಳು ರೇಡಿಯೊ ನಿರೂಪಕ ಕೈಲ್ಗೆ ಸಂಪೂರ್ಣ ಆಘಾತ ಮತ್ತು ಗೊಂದಲಕ್ಕೆ ಕಾರಣವಾಯಿತು. ಏತನ್ಮಧ್ಯೆ, ಜಾಕಿ ಓ ಆಂಥೋನಿಯ ಪ್ರತಿಪಾದನೆಯನ್ನು ಪುನರುಚ್ಚರಿಸಿ ಆಂಟನಿಯ ಪ್ರಸ್ತಾಪವನ್ನು ಜಾಕಿ ಓ ಟೀಕಿಸಿದರು. ನಿಮ್ಮ ಕಲ್ಪನೆಯು ಮಹಿಳೆಯರಿಗೆ “ಅವಮಾನಕರ” ಎಂದು ಉಲ್ಲೇಖಿಸಿದರು ಮತ್ತು ಮಹಿಳಾ ಉದ್ಯೋಗಿಗಳು ತಮ್ಮ ಸಹೋದ್ಯೋಗಿಗಳು ಮತ್ತು ಗ್ರಾಹಕರಿಗೆ ತಮ್ಮ ಮುಟ್ಟಿನ ಬಗ್ಗೆ ಬಹಿರಂಗಪಡಿಸಲು ಒತ್ತಾಯಿಸಬಾರದು ಎಂದು ಅವರು ಹೇಳಿದರು.
Optical illusion: ನಿಮಗೊಂದು ಸವಾಲ್: ಈ ನಾಯಿಯ ಮುಖದ ಚಿತ್ರದೊಳಗೆ ಇದೆ ಮಾನವನ ಮುಖ… ಕಂಡುಹಿಡಿಯಿರಿ!
ಸಿಎಂ ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ಹೊಳಿಮಠ ನಿಧನಕ್ಕೆ, ಮಾಜಿ ಸಿಎಂ ಕುಮಾರಸ್ವಾಮಿ ಸಂತಾಪ