ಉತ್ತರಕನ್ನಡ : ಕಳೆದ ಕೆಲವು ದಿನಗಳ ಹಿಂದೆ ಹೈದರಾಬಾದ್ ನಲ್ಲಿ ಒಮ್ಮೆಲೆ ಮೂರು ಪೂರಿ ತಿನ್ನಲು ಹೋಗಿ ಗಂಟಲಲ್ಲಿ ಸಿಲುಕಿ ಬಾಲಕನೊಬ್ಬ ಸಾವನ್ನಪ್ಪಿದ್ದ. ಇದೀಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಲೂನ್ ಊದುವ ವೇಳೆ ಗಂಟಲಲ್ಲಿ ಸಿಲುಕಿ 13 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಜೋಗನಕೊಪ್ಪ ಎಂಬ ಗ್ರಾಮದಲ್ಲಿ ನಡೆದಿದೆ.
ಹೌದು ಬಲೂನ್ ಊದುವಾಗ ಗಂಟಲಲ್ಲಿ ಸಿಲುಕಿ ಬಾಲಕ ಸಾವನ್ನಪ್ಪಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಜೋಗನಕೊಪ್ಪ ಗ್ರಾಮದಲ್ಲಿ ಈ ಒಂದು ದುರ್ಘಟನೆ ನಡೆದಿದೆ. ನವೀನ್ ನಾರಾಯಣ್ ಬೆಳಗಾವ್ಕರ್ (13) ಎನ್ನುವ ಬಾಲಕ ಮೃತ ದುರ್ದೇವಿ ಎಂದು ತಿಳಿದುಬಂದಿದೆ. ಜೋಗನಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನವೀನ್ ನಾರಾಯಣ್ ಬೆಳಗಾಂವ್ಕರ್ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.
ಮನೆಯಲ್ಲಿ ಬಲೂನ್ ಊದುವಾಗ ಒಮ್ಮೆಲೇ ಗಂಟಲಲ್ಲಿ ಸಿಲುಕಿ ದುರಂತ ಸಂಭವಿಸಿದೆ. ಉಸಿರು ತೆಗೆದುಕೊತ್ತಿರುವಾಗಲೇ ಗಂಟಲಲ್ಲಿ ಬಲೂನ್ ಸಿಲುಕಿದೆ. ಉಸಿರುಗಟ್ಟಿ ನಾರಾಯಣ್ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಬಾಯಲ್ಲಿ ಊದುವಾಗ ಏಕಾಏಕಿ ಗಂಟಲಲ್ಲಿ ಬಲೂನ್ ಸಿಲುಕಿದೆ. ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಬಾಲಕ ನವೀನ್ ನಾರಾಯಣ್ ಸಾವನಪ್ಪಿದ್ದಾನೆ. ಘಟನೆ ಕುರಿತಂತೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.