ಬೆಂಗಳೂರು : ಬೆಂಗಳೂರಿನಲ್ಲಿ ಕರ್ತವ್ಯದಲ್ಲಿದ್ದ ಬಿಎಂಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕನ ಮೇಲೆ ಯುವಕರಿಬ್ಬರು ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಘಟಕ-30ರ ಎಲೆಕ್ಟ್ರಿಕ್ ವಾಹನ ಸಂಖ್ಯೆ KA51AH6033 ಮಾರ್ಗ ಸಂಖ್ಯೆ 290E/26 ರಲ್ಲಿ ಯಲಹಂಕದಿಂದ ಶಿವಾಜಿನಗರಕ್ಕೆ ತೆರಳುವಾಗ ಮಾರ್ಗಮಧ್ಯೆ ಟ್ಯಾನರಿ ರಸ್ತೆಯ ಕೆನರಾ ಬ್ಯಾಂಕ್ ಬಳಿ ಸಂಜೆ 17:25ರ ಸಮಯದಲ್ಲಿ ಸ್ಕೂಟಿ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ವ್ಯಕ್ತಿಗಳು ವಾಹನದ ಮುಂಬಾಗಿಲಿನಿಂದ ಒಳ ಬಂದು ಕರ್ತವ್ಯದಲ್ಲಿದ್ದ ಚಾಲಕರಾದ ಗಗನ್ ರವರಿಗೆ ಏಕಾಏಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರ ಕೈ ತಿರುಗಿಸಿ , ಮುಖಕ್ಕೆ ಗುದ್ದಿರುತ್ತಾರೆ.
ಆ ಸಮಯದಲ್ಲಿ ನಿರ್ವಾಹಕರಾದ ಶಿವಕುಮಾರ್ ಅವರನ್ನು ತಡೆಯಲು ಹೋದಾಗ ನಿರ್ವಾಹಕರನ್ನು ಹೊರಗಡೆ ಎಳೆದು , ಬಸ್ಸಿನ ಮುಂಭಾಗದಲ್ಲಿ ನಿಲ್ಲಿಸಿ , ಥಳಿಸಿ, ಮುಖ , ಕತ್ತು, ಸೊಂಟದ ಭಾಗದಲ್ಲಿ ಗುದ್ದಿ ಹಲ್ಲೆ ಮಾಡಿರುತ್ತಾರೆ. Tannery ರಸ್ತೆ ಯಲ್ಲಿಯೇ ಇದ್ದ LC staff ಕೂಡಲೇ ಸದರಿ ಚಾಲಕರು ಮತ್ತು ನಿರ್ವಾಹಕರನ್ನು ಬೌರಿಂಗ್ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಿರುತ್ತಾರೆ. ಇಬ್ಬರಿಗೂ ರಕ್ತ ಗಾಯಗಳಗಿರುವುದಿಲ್ಲ. ಆದರೆ ನಿರ್ವಾಕರಿಗೆ ಮೂಗೆಟುಗಳಾಗಿದ್ದು, ನೋವಾಗಿರುತ್ತದೆ. ಸ್ಕ್ಯಾನ್ ಮಾಡಲಾಗಿದೆ ಹಾಗೂ ಚಿಕಿತ್ಸೆ ನಡೆಯುತ್ತಿದೆ. ಬೌರಿಂಗ್ ಆಸ್ಪತ್ರೆಯಲ್ಲಿ MLC ಮಾಡಲಾಗಿರುತ್ತದೆ. KG ಹಳ್ಳಿ ಪೊಲೀಸ್ ಠಾಣೆಯಲ್ಲಿ ಚಾಲಕ ಹಾಗೂ ನಿರ್ವಾಹಕರಿಂದ ಲಿಖಿತ ದೂರನ್ನು ನೀಡಲಾಗಿದೆ. ವಾಹನದ ಸಿಸಿಟಿವಿ ಫೂಟೇಜ್ ಪರಿಶೀಲಿಸಲಾಗುತ್ತಿದೆ.