ಆಂಧ್ರಪ್ರದೇಶ : ಸಾಮಾನ್ಯವಾಗಿ ಯಾರೇ ನಿದ್ದೆಗಣ್ಣಲ್ಲಿ ಇದ್ದರೂ ಕೂಡ ಗಂಟಲಿನಲ್ಲಿ ಹೋಗುವಂತ ಚಿಕ್ಕ ವಸ್ತುಗಳು ನುಂಗಬಹುದು. ಆದರೆ ಇಲ್ಲೊಬ್ಬ ವ್ಯಕ್ತಿ ನಿದ್ದೆ ಮಾಡುತ್ತಲೇ ಹಲ್ಲಿನ ಸೆಟ್ ಒಂದು ನುಂಗಿ ಶ್ವಾಸಕೋಶದಲ್ಲಿ ಸಿಲುಕಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಅಮರಾವತಿಯಲ್ಲಿ ನಡೆದಿದೆ.
ಹೌದು ಅಮರಾವತಿಯ 52 ವರ್ಷದ ಈ ವ್ಯಕ್ತಿ ಕಳೆದ 7 ವರ್ಷಗಳಿಂದ ಹಲ್ಲುಸೆಟ್ ಬಳಸುತ್ತಿದ್ದರು. ಕಾಲಕ್ರಮೇಣ ಅದು ಸಡಿಲವಾಗಿದ್ದು, ಅವರು ನಿದ್ರಿಸುತ್ತಿದ್ದಾಗ ಶ್ವಾಸಕೋಶಗಳ ಒಳಗೆ ಹೋಗಿದೆ. ಇದರಿಂದಾಗಿ ಅವರಿಗೆ ಕೆಮ್ಮು ಶುರುವಾಗಿದ್ದು, ಚಿಕಿತ್ಸೆಗಾಗಿ ವಿಶಾಖಪಟ್ಟಣಂನ ಆಸ್ಪತ್ರೆಗೆ ಹೋಗಿದ್ದಾರೆ. ಈ ವೇಳೆ ಎಕ್ಸ್‌ರೇ ಹಾಗೂ ಸಿಟಿ ಸ್ಕ್ಯಾನ್ ನಡೆಸಿದ ವೈದ್ಯರು ಬ್ರಾಂಕೋಸ್ಕೋಪಿಯ ಮೂಲಕ ಹಲ್ಲು ಸೆಟ್ ಅನ್ನು ಹೊರತೆಗೆದಿದ್ದಾರೆ.