ಉತ್ತರಪ್ರದೇಶ : ಗಾಳಿಪಟ ಹಾರಿಸಲು ಗಾಜು ಮಿಶ್ರಿತ ದಾರ (ಮಾಂಜಾ) ವನ್ನು ಖರೀಸಿದ ಯುವಕರು, ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಯುವಕನ ಕುತ್ತಿಗೆಗೆ ತಾಗಿದೆ. ಈ ವೇಳೆ ದಾರದಿಂದ ಕತ್ತು ಸೀಳಿ ಯುವಕ ಸಾವನ್ನಪ್ಪಿರುವ ಘೋರ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.
ಮೃತನನ್ನು ಸುಹೇಲ್(22) ಎಂದು ಗುರುತಿಸಲಾಗಿದೆ. ಸುಹೇಲ್ ಮತ್ತು ಆತನ ಸ್ನೇಹಿತ ನವಾಜಿಶ್ ಶಾಪಿಂಗ್ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಘಟನೆಯಲ್ಲಿ ನವಾಜಿಶ್ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ. ಇಬ್ಬರು ಗ್ಲಾಸ್ ಲೇಪಿತ ಗಾಳಿಪಟದ ತಂತಿಗಳನ್ನು ಖರೀದಿಸಿದ್ದರು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಚೈನೀಸ್ ಮಾಂಜಾ ಎಂನುಗ ಈ ಒಂದು ಗಾಜು ಮಿಶ್ರಿತ ದಾರವು ಭಾರತದಲ್ಲಿ ನಿಷೇಧವಿದ್ದರೂ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಘಟನೆಯ ನಂತರ, ಮೀರತ್ ಪೊಲೀಸರು ಚೈನೀಸ್ ಮಾಂಜಾವನ್ನು ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ ಐವರು ವ್ಯಾಪಾರಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಚೈನೀಸ್ ಮಾಂಜಾವನ್ನು ತುಂಬಿದ ಮೂರು ಚೀಲಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.