ಬೆಂಗಳೂರು : ಬೆಂಗಳೂರಲ್ಲಿ ಕಾರು ಪಾರ್ಕ್ ಮಾಡಿ ಹೋಗುವವರೇ ಹುಷಾರ್.ಯಾಕೆ ಈ ಮಾತು ಹೇಳಲಾಗುತ್ತಿದೆ ಅಂದರೆ, ಬೆಳಗಾಗೋದ್ರೊಳಗೆ ನಿಮ್ಮ ಕಾರಿನ ಚಕ್ರಗಳೇ ಇರಲ್ಲ. ಹಾಗಾಗಿ ಪಾರ್ಕ್ ಮಾಡೋಕು ಮುನ್ನ ಸ್ವಲ್ಪ ಎಚ್ಚರದಿಂದ ಇರಿ.
ಇದೀಗ ಪಾರ್ಕ್ ಮಾಡಿದ ಕಾರಿನ ನಾಲ್ಕು ಚಕ್ರಗಳನ್ನು ಕಳ್ಳರು ಕದ್ದಿದ್ದಾರೆ. ಗಾಂಧಿನಗರ ಹೋಟೆಲ್ ಬಳಿ ಕಾರಿನ ನಾಲ್ಕು ಚಕ್ರಗಳನ್ನು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ. ಹುಬ್ಬಳ್ಳಿ ಮೂಲದ ಗೋವಿಂದ ಗೌಡರಿಗೆ ಈ ಒಂದು ಕಾರು ಸೇರಿದ್ದು ಕೆಲಸದ ನಿಮಿತ್ತ ಗೋವಿಂದ ಗೌಡ ಅವರು ಶನಿವಾರ ಬೆಂಗಳೂರಿಗೆ ಬಂದಿದ್ದಾರೆ.
ಗಾಂಧಿನಗರದ ಹೋಟೆಲ್ ಬಳಿ ತಮ್ಮ ಕಾರು ಪಾರ್ಕ್ ಮಾಡಿದ್ದರು.ಆದರೆ ಬೆಳಿಗ್ಗೆ ನೋಡುವಷ್ಟರಲ್ಲಿ ಕಾರಿನ ನಾಲ್ಕು ಚಕ್ರಗಳು ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಕಾರಿನ ನಾಲ್ಕು ಚಕ್ರಗಳು ಮಾಯ ಆಗಿದ್ದನ್ನು ನೋಡಿ ಗೋವಿಂದ ಗೌಡ ದಂಗಾಗಿದ್ದಾರೆ.