ಮೇಘಾಲಯ : ಸಾಮಾನ್ಯವಾಗಿ ಗುಡ್ಡಗಾಡಿನಲ್ಲಿ ವಾಸಿಸುವ ಜನರು ಕಾಡಿನಲ್ಲಿ ಸಿಗುವ ಆಹಾರ ಪದಾರ್ಥಗಳನ್ನ ಬಳಸೋದು ವಾಡಿಕೆ. ಆದರೆ ಕೆಲವೊಮ್ಮೆ ಅವರ ಲೆಕ್ಕಾಚಾರ ಕೂಡ ಉಲ್ಟಾ ಆಗುವ ಸಾಧ್ಯತೆ ಇರುತ್ತದೆ. ಇದೀಗ ಮೇಘಾಲಯದಲ್ಲಿ ಕೊಡ ಅಂತಹದ್ದೇ ಘೋರ ದುರಂತ ಸಂಭವಿಸಿದ್ದು, ವಿಷ ಅಣಬೆ ಸೇವಿಸಿ 6 ಜನರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಹೌದು ಕಾಡಿನಲ್ಲಿ ಸಿಗುವ ವಿಷದ ಅಣಬೆಯನ್ನು ಸೇವಿ ಆರು ಮಂದಿ ಸಾವನ್ನಪ್ಪಿರುವ ಘಟನೆ ಮೇಘಾಲಯದ ಉತ್ತರ ಜೈಂತಿಯಾ ಹಿಲ್ಸ್ ಜಿಲ್ಲೆಯಲ್ಲಿ ನಡೆದಿದೆ.ಈ ಪ್ರದೇಶದಲ್ಲಿ ಜನರು ಕಾಡಿಗೆ ತೆರಳಿ ಅಣಬೆಯನ್ನು ಸಂಗ್ರಹಿಸಿ, ದೈನಂದಿನ ಆಹಾರದಲ್ಲಿ ಬಳಸುವುದು ಅವರ ನಿತ್ಯ ಬದುಕಿನ ರೂಢಿ.
ಆದರೆ ಇವುಗಳನ್ನು ಎಚ್ಚರಿಕೆಯಿಂದ ಸೇವನೆ ಮಾಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಕಾಡಿನಲ್ಲಿ ಕೆಲವು ಅಣಬೆಗಳು ವಿಪರೀತ ವಿಷಕಾರಿಯಾಗಿದ್ದು ಅಜೀರ್ಣ, ಹೊಟ್ಟೆಯುಬ್ಬರ, ಭ್ರಮಾಧೀನತೆ ಹಾಗೂ ಕಿಡ್ನಿ ವೈಫಲ್ಯಗಳಂಥಾ ಗಂಭೀರ ಪರಿಣಾಮವನ್ನು ಉಂಟು ಮಾಡಬಲ್ಲುದಾಗಿದೆ. ಈ ದುರ್ಘಟನೆ ಗ್ರಾಮಾಂತರ ಪ್ರದೇಶದಿಂದ ವರದಿಯಾಗಿರುವುದಾಗಿ ಮೇಘಾಲಯ ಸರ್ಕಾರ ತಿಳಿಸಿದೆ.