ಮೀರತ್ : ಸಾಮಾನ್ಯವಾಗಿ ದೊಡ್ಡ ದೊಡ್ಡ ಅಪಾರ್ಟ್ಮೆಂಟ್ ಗಳಲ್ಲಿ ಅಥವಾ ಮಾಲ್ ಗಳಲ್ಲಿ ಲಿಫ್ಟ್ ಬಳಸುವಾಗ ಎಚ್ಚರದಿಂದ ಇರುವುದು ಒಳ್ಳೆಯದು. ಇದೀಗ ಮೀರತ್ ನಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು, ಶೋರೂಂನ ಲಿಫ್ಟ್‌ನಲ್ಲಿ ತಲೆ ಸಿಲುಕಿ ಉದ್ಯಮಿಯೊಬ್ಬರು ಮೃತಪಟ್ಟಿರುವ ಘಟನೆ ಮೀರತ್ನ ಸೂರಜ್ಕುಂಡದಲ್ಲಿ ನಡೆದಿದೆ. ದೇವನಗರದಲ್ಲಿರುವ ತಮ್ಮ ಶೋ ರೂಂನಲ್ಲಿ ಲಿಫ್ಟ್‌ನಲ್ಲಿ ಸಿಲುಕಿಕೊಂಡು 63 ವರ್ಷದ ಉದ್ಯಮಿ ಮೃತಪಟ್ಟಿದ್ದಾರೆ. ಉದ್ಯಮಿ ಹರ್ವಿಂದರ್ ಸಿಂಗ್ ದುರಂತ ಸಾವು ಕಂಡಿದ್ದಾರೆ.
ಹೌದು ಇಂಡಿಯನ್ ಸ್ಪೋರ್ಟ್ಸ್ ಹೌಸ್ ಮಾಲೀಕ ಸಿಂಗ್ ಶನಿವಾರ ಸಂಜೆ ಎರಡನೇ ಮಹಡಿಗೆ ಹೋಗಲು ಕಾರ್ಗೋ ಲಿಫ್ಟ್ ಬಳಸುತ್ತಿದ್ದಾಗ ವಿದ್ಯುತ್ತ ಕಡಿತಗೊಂಡಿತ್ತು. ತಲೆಯನ್ನು ಹೊರಗೆ ತಲೆ ಹಾಕಿ ನೋಡುತ್ತಿದ್ದಾಗ ಏಕಾಏಕಿ ವಿದ್ಯುತ್ ಆನ್ ಆಗಿ ಲಿಫ್ಟ್ ಚಲಿಸಲು ಆರಂಭಿಸಿತ್ತು. ಅವರ ತಲೆ ಲಿಫ್ಟ್ ಮಧ್ಯೆ ಸಿಕ್ಕಿಬಿದ್ದಿತ್ತು. ಸಿಸಿಟಿವಿಯಲ್ಲಿ ಸಿಬ್ಬಂದಿ ಅವರನ್ನು ಗಮನಿಸಲು ಸುಮಾರು 30 ನಿಮಿಷಗಳು ಬೇಕಾಯಿತು. ನೆರೆಹೊರೆಯವರ ಸಹಾಯದಿಂದ, ಲಿಫ್ಟ್ ಅನ್ನು ಬಲವಂತವಾಗಿ ತೆರೆಯಲಾಯಿತು, ಮತ್ತು ಸಿಂಗ್ ಅವರ ದೇಹವನ್ನು ಹೊರತೆಗೆದು ನುತಿಮಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.