ಬೆಂಗಳೂರು : ಇತ್ತೀಚಿಗೆ ಈ ಹೃದಯಾಘಾತ ಅನ್ನುವುದು ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ಧರವರೆಗೂ ಸಾಮಾನ್ಯ ಕಾಯಿಲೆಯಂತೆ ಆಗಿಬಿಟ್ಟಿದೆ. ಅದರಲ್ಲೂ ಚಿಕ್ಕ ಮಕ್ಕಳಲ್ಲಿ ಈ ಹೃದಯ ಸಂಬಂಧಿ ಕಾಯಿಲೆಗೆ ಏನು ಕಾರಣ ಅನ್ನೋದು ತಜ್ಞರು ಇದೀಗ ಬಹಿರಂಗಪಡಿಸಿದ್ದಾರೆ. ಮನೆಯಲ್ಲಿ ಪಾಲಿಶ್ ಮಾಡುವ ಅಕ್ಕಿ ಸೇವನೆಯಿಂದ ಈ ಒಂದು ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ ಎಂದು ಅಘಾತಕಾರಿ ಅಂಶವನ್ನು ತಜ್ಞರು ಬಹಿರಂಗಪಡಿಸಿದ್ದಾರೆ.
ಹೌದು ದಿನನಿತ್ಯದ ನಮ್ಮ ಆಹಾರ ಪದ್ಧತಿಯಲ್ಲಿ ಆರೋಗ್ಯ ಕುತ್ತು ತರುವ ಅನೇಕ ತಿನಿಸು, ಪದಾರ್ಥಗಳನ್ನು ಸೇವನೆ ಮಾಡುತ್ತಿದ್ದೇವೆ. ಅದರಲ್ಲೂ ಅನ್ನ ಎಲ್ಲ ಮನೆಗಳಲ್ಲಿ ಸಾಮಾನ್ಯವಾಗಿ ದಿನನಿತ್ಯ ಸೇವಿಸುವ ಒಂದು ಆಹಾರವಾಗಿದೆ. ಬಿಳಿ ಅಕ್ಕಿಯಲ್ಲೇ ಬಗೆ ಬಗೆಯ ಅಡುಗೆ ಮಾಡಿ ಸೇವಿಸಲಾಗುತ್ತದೆ. ಈ ಬೆನ್ನಲ್ಲೇ ಇದೀಗ ಈ ಬಿಳಿ ಪಾಲಿಶ್ ಅಕ್ಕಿ ಸೇವಿಸುವವರು ಎಚ್ಚರದಿಂದ ಇರಬೇಕಾದ ಪರಿಸ್ಥಿತಿ ಬಂದಿದೆ. ಏಕೆಂದರೆ ಹೃದಯ ಸಂಬಂಧಿ ಕಾಯಿಲೆಗಳಿಗೆ ಇದೇ ಪಾಲಿಶ್ ಅಕ್ಕಿ ಕಾರಣ ಎಂದು ತಜ್ಞರು ತಿಳಿಸಿದ್ದಾರೆ.
ಇತ್ತೀಚಿಗೆ ಪುಟ್ಟ ಮಕ್ಕಳಿಗೂ ಕೂಡ ಹೃದಯ ಸಂಬಂಧಿ ಖಾಯಿಲೆಗಳು ಬರುತ್ತಿವೆ. ಇದಕ್ಕೆ ಕಾರಣವೇನು ಎಂಬುವುದು ಜಯದೇವ ಹೃದ್ರೋಗ ಸಂಸ್ಥೆಯ ವೈದ್ಯರು ಬಹಿರಂಗಪಡಿಸಿರುವ ವರದಿಯಲ್ಲಿ ಅಡಕವಾಗಿದೆ. ಸುಮಾರು 400 ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿದಾಗ ಗೊತ್ತಾಗಿದ್ದು, ಗರ್ಭಿಣಿಯರು ಹಾಗೂ ಮಕ್ಕಳು ಪಾಲಿಶ್ ಮಾಡಿರುವ ಬಿಳಿ ಅಕ್ಕಿಯನ್ನು ಸೇವಿಸಿರುವುದರಿಂದ ಹೃದಯ ಸಂಬಂಧಿ ಸಮಸ್ಯೆಗೆ ಒಳಗಾಗುತ್ತಿದ್ದಾರೆ ಎಂಬ ಆತಂಕಕಾರಿ ವಿಚಾರ ಬಹಿರಂಗಗೊಂಡಿದೆ.