ರಾಜಸ್ತಾನ್ : ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಯುವ ಜನತೆ ಇಯರ್ ಬಡ್ ಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಅಲ್ಲದೆ ಕಳೆದ ಕೆಲವು ತಿಂಗಳ ಹಿಂದೆ ಇದೇ ಇಯರ್ ಬಡ್ ಸ್ಪೋಟಗೊಂಡು ಯುವಕನೊಬ್ಬ ಸಾವನಪ್ಪಿದ ಪ್ರಕರಣ ನಡೆದಿತ್ತು. ಇದೀಗ ರಾಜಸ್ಥಾನದ ಜೈಪುರ್ ನಲ್ಲಿ ಇಯರ್ ಬಡ್ ಸ್ಫೋಟಗೊಂಡು ವಿದ್ಯಾರ್ಥಿನಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ವರದಿಯಾಗಿದೆ.
ಹೌದು ಇಯರ್ ಬಡ್ ಕಿವಿಯಲ್ಲಿದ್ದಾಗಲೇ ಸ್ಫೋಟಗೊಂಡು ಯುವತಿ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ರಾಜಸ್ತಾನದ ಮೆಡಿಕಲ್ ವಿದ್ಯಾರ್ಥಿಯೊಬ್ಬರು, ಜೆಬಿಎಲ್ ಇಯರ್‌ಬಡ್ ಕಿವಿಗೆ ಹಾಕಿರುವಾಗಲೇ ಸ್ಫೋಟಗೊಂಡು ತಮ್ಮ ಕಿವಿಗೆ ಹಾನಿಯಾಗಿರುವುದಾಗಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹೇಳಿಕೊಂಡಿದ್ದಾರೆ. ಅವರ ಪೋಸ್ಟ್ ವೈರಲ್ ಆಗ್ತಿದ್ದಂತೆ ಜೆಬಿಎಲ್ ಸಂಸ್ಥೆ ಕೂಡ ಪ್ರತಿಕ್ರಿಯೆ ನೀಡಿದೆ. ಜೊತೆಗೆ ಇಯರ್ ಪಾಡ್ ಬಳಸುವವರಿಗೆ ಕೆಲ ಸಲಹೆಗಳನ್ನೂ ನೀಡಿದೆ.
JBL ಬಲಭಾಗದ ಇಯರ್ ಬಡ್ ನನ್ನ ಕಿವಿಯಲ್ಲಿ ಸಿಡಿದು ಟಿಎಂ ಪೊರೆಯ ಉರಿಯೂತಕ್ಕೆ (ಹಾನಿ) ಕಾರಣವಾಯಿತು. ಇದು ಒಂದು ತಿಂಗಳ ಹಿಂದೆ ನನ್ನ ಸಹೋದರಿ ನನಗೆ ಉಡುಗೊರೆಯಾಗಿ ನೀಡಿದ್ದಳು, ಜೆಬಿಎಲ್ ಟ್ಯೂನ್ ಬೀಮ್ 2 ಎಂದು ಬರೆದು ಅವರು @JBLaudioಗೆ ಟ್ಯಾಗ್ ಮಾಡಿದ್ದಾರೆ. ಜೊತೆಗೆ ಅವರು ಘಟನೆಯ ಬಳಿಕ ವೈದ್ಯರ ಬಳಿ ತಮ್ಮನ್ನ ತಾವು ತೋರಿಸಿಕೊಂಡ ಬಳಿಕ ವೈದ್ಯರು ನೀಡಿದ ಪ್ರಿಸ್ಕ್ರಿಪ್ಸನ್ ಫೋಟೋವನ್ನ ಕೂಡ ಅವರು ಹಂಚಿಕೊಂಡಿದ್ದಾರೆ.
ವಿದ್ಯಾರ್ಥಿನಿ ಹಂಚಿಕೊಂಡ ವೈದ್ಯಕೀಯ ಪ್ರಿಸ್ಕ್ರಿಪ್ಷನ್‌ನಲ್ಲಿ ಘಟನೆಯ ಬಳಿಕ ಯುವತಿಗೆ ತಲೆತಿರುಗುವಿಕೆ, ವಾಕರಿಕೆ ಮತ್ತು ವಾಂತಿಯಂತಹ ಲಕ್ಷಣಗಳು ಕಂಡುಬಂದಿದೆ. ಗಾಯಕ್ಕೆ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಯ ಅಗತ್ಯವಿದೆ ಎಂದು ಸೂಚಿಸಲಾಗಿದೆ. ಈ ವಿಚಾರದ ಬಗ್ಗೆ ನೆಟ್ಟಿಗರು ಚರ್ಚಿಸಲು ಆರಂಭಿಸಿದ್ದರಿಂದ ಈ ಪೋಸ್ಟ್ ಶೀಘ್ರದಲ್ಲೇ ವೈರಲ್ ಆಗಿದೆ.
JBL right side earphones bursted in my ear and lead to TM membrane inflammation
It was gifted to me by my sister one month back , JBL tune beams 2 @JBLaudio pic.twitter.com/HTvceq0y3R— A🕶 (@Capybara2233_) April 8, 2026








