ಬೆಂಗಳೂರು : ಐಸ್ ಕ್ರೀಮ್ ತಿನ್ನುವ ಮೊದಲು ಇದೀಗ ಎಚ್ಚರದಿಂದ ಇರುವುದು ಒಳ್ಳೆಯದು. ಏಕೆಂದರೆ ಐಸ್ ಕ್ರೀಮ್ ನಲ್ಲಿ ಪ್ಲಾಸ್ಟಿಕ್ ರಬ್ಬರ್ ಒಂದು ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಈ ಒಂದು ಘಟನೆ ನಡೆದಿದ್ದು, ಐಸ್ ಕ್ರೀಮ್ ನಲ್ಲಿ ಪ್ಲಾಸ್ಟಿಕ್ ರಬ್ಬರ್ ನೋಡಿ ಗ್ರಾಹಕರು ಒಬ್ಬರು ಹೌಹಾರಿದ್ದಾರೆ.
ಉಡುಪಿಯ ಗ್ರಾಂಡ್ ಹೋಟೆಲ್ ನಲ್ಲಿ ಈ ರೀತಿ ಐಸ್ ಕ್ರೀಮ್ ನಲ್ಲಿ ರಬ್ಬರ್ ಪತ್ತೆಯಾಗಿದೆ. ಬೆಂಗಳೂರಿನ ನೆಲಮಂಗಲ ನಗರದ ಸೊಂಡೆಕೊಪ್ಪ ಬೈಪಾಸ್ ನಲ್ಲಿ ಐಸ್ ಕ್ರೀಂ ತಿನ್ನುವ ಸಂದರ್ಭದಲ್ಲಿ ಬಾಯಿಗೆ ರಬ್ಬರ್ ಸಿಕ್ಕಿದೆ. ಇದನ್ನ ಪ್ರಶ್ನೆ ಮಾಡಿದಕ್ಕೆ ಕೆಲವೊಂದು ಸಲ ಕಾಮನ್ ಬಿಡಿ ಎಂದು ಹೋಟೆಲ್ ಮಾಲೀಕ ಉಡಾಫೆ ಆಗಿ ಹೇಳಿಕೆ ನೀಡಿದ್ದು, ಗ್ರಾಹಕರು ಆತನನ್ನು ತರಾಟೆಗೆ ತೆಗೆದುಕೊಂಡಿದ್ದು ಈ ವಿಚಾರವಾಗಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.








