ಮಂಗಳೂರು : ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಹಾಕಿಸಿಕೊಳ್ಳುವ ಸಂದರ್ಭದಲ್ಲಿ ಅಲ್ಲಿ ಕೆಲವು ಚಿಹ್ನೆಗಳನ್ನು ನಾವು ನೋಡುತ್ತೇವೆ. ಮೊಬೈಲ್ ಆನ್ ಮಾಡಬಾರದು, ಸಿಗರೇಟ್ ಸೇದಬಾರದು ಹಾಗೂ ಇನ್ನು ಹಲವು ಚಿಹ್ನೆಗಳನ್ನ ನೋಡಿರುತ್ತೇವೆ.
ಅವೆಲ್ಲ ಮುನ್ನೆಚ್ಚರಿಕೆ ಕ್ರಮವಾಗಿ ಹಾಕಿರುತ್ತಾರೆ. ಇದೀಗ ಮಂಗಳೂರಿನಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳುತ್ತಿರುವಾಗಲೇ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಹೌದು ಪೆಟ್ರೋಲ್ ಬಂಕ್ ನಲ್ಲಿ ಮಾರುತಿ 800 ಕಾರೊಂದು ಹೊತ್ತಿ ಉರಿದಿದೆ. ಮಂಗಳೂರಿನ ಲೇಡಿ ಹಿಲ್ ನ ಪೆಟ್ರೋಲ್ ಬಂಕ್ ನಲ್ಲಿ ಈ ಒಂದು ಘಟನೆ ನಡೆದಿದೆ.
ಪೆಟ್ರೋಲ್ ಹಾಕಿಸುತ್ತಿದ್ದ ಸಂದರ್ಭದಲ್ಲಿ ಮಾರುತಿ 800 ಕಾರ್ ಒಂದು ಹೊತ್ತಿ ಉರಿದಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಕಾರಿನಿಂದ ತಕ್ಷಣ ಹೊರಬಂದು ಬಚಾವ್ ಆಗಿದ್ದಾನೆ. ಪಾರ್ಶ್ವನಾಥ ಎನ್ನುವವರಿಗೆ ಮಾರುತಿ 800 ಕಾರು ಸೇರಿದೆ. ಕೂಡಲೇ ಪೆಟ್ರೋಲ್ ಬಂಕ್ ಸಿಬ್ಬಂದಿ ನೀರು ಹಾಕಿ ಬೆಂಕಿಯನ್ನು ನಂದಿಸಿದ್ದಾರೆ. ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.