ಕಳೆದ ಕೆಲವು ದಿನಗಳ ಹಿಂದೆ ಅಷ್ಟೇ ತಮಿಳುನಾಡಿನಲ್ಲಿ ಬಾಳೆಹಣ್ಣಿನ ಪೀಸ್ ಗಂಟಲಲ್ಲಿ ಸಿಲುಕಿ 5 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ವರದಿಯಾಗಿತ್ತು ಆದರೆ ಬೆನ್ನಲ್ಲೇ ಇದೀಗ ಆಟೋ ಚಾಲಕ ಒಬ್ಬರು ಚಿಕನ್ ತಿನ್ನುವಾಗ ಅದರ ಪಿಸ್ ಗಂಟಲಲ್ಲಿ ಸಿಲುಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಹೌದು ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ಯೆಲ್ಲಾರೆಡ್ಡಿಪೇಟೆ ಮಂಡಲದ ಗೊಲ್ಲಪಳ್ಳಿಯ ಕೆಸಿಆರ್ ಡಬಲ್ ಬೆಡ್ರೂಮ್ ಕಾಲೋನಿಯ ಸುರೇಂದರ್ (45) ಎನ್ನುವವರಿಗೆ ಕೋಳಿ ತುಂಡು ಗಂಟಲಿನಲ್ಲಿ ಸಿಲುಕಿಕೊಂಡು ಸಾವನ್ನಪ್ಪಿದ್ದಾರೆ. ಸುರೇಂದರ್ ಟ್ರಾಲಿ ಆಟೋ ಓಡಿಸುವ ಮೂಲಕ ತನ್ನ ಕುಟುಂಬವನ್ನು ಪೋಷಿಸುತ್ತಿದ್ದರು.
ಭಾನುವಾರವಾದ್ದರಿಂದ ಮನೆಯಲ್ಲಿ ಕೋಳಿ ಬೇಯಿಸಿ ತಿನ್ನುತ್ತಿದ್ದರು. ಮಧ್ಯಾಹ್ನ ಮನೆಯಲ್ಲಿ ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದಾಗ, ಸುರೇಂದರ್ ಅವರ ಗಂಟಲಿನಲ್ಲಿ ಕೋಳಿ ತುಂಡು ಸಿಲುಕಿಕೊಂಡಿತು. ಇದರಿಂದಾಗಿ, ಅವರಿಗೆ ದೀರ್ಘಕಾಲದವರೆಗೆ ಉಸಿರಾಡಲು ತೊಂದರೆಯಾಯಿತು. ಅವರು ಉಸಿರುಗಟ್ಟಿ ಸಾವನ್ನಪ್ಪಿದರು. ಕುಟುಂಬ ಸದಸ್ಯರ ಮೂಲಕ ಈ ವಿಷಯ ಬೆಳಕಿಗೆ ಬಂದಿದೆ. ಮೃತರು ಪತ್ನಿ ಕವಿತಾ ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.







