ಮೈಸೂರು : ಖರ್ಚಿಗೆ ಹಣ ಕೊಡಲಿಲ್ಲವೆಂದು ಮಂಗಳಮುಖಿಯರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಮೈಸೂರಿನ ಸಾತಗಳ್ಳಿ ಬಳಿಯ ಅಮೃತಾ ಬಡಾವಣೆಯಲ್ಲಿ ಕೃತ್ಯ ನಡೆದಿದೆ. ಮಂಗಳಮುಖಿಯರಾದ ಪಾರಿ, ಆನಂ ಮೇಲೆ ತಲ್ವಾರ್ ನಿಂದ ಹಲ್ಲೆ ನಡೆಸಲಾಗಿದೆ.
ಬಡಾವಣೆ ನಿವಾಸಿ ಆನಂ ಬಳಿ ಯುವಕರು ಹಣ ಕೇಳಿದ್ದರು. ಹಣ ನೀಡದ ಹಿನ್ನೆಲೆ ಯುವಕರು ಗಲಾಟೆ ಮಾಡಿದ್ದಾರೆ. ಸ್ನೇಹಿತೆ ಪಾರಿಯನ್ನು ಸ್ಥಳಕ್ಕೆ ಕರೆಸಿಕೊಂಡಿದ್ದ ಆನಂ, ನಂತರ ಮತ್ತಷ್ಟು ಗಲಾಟೆ ವಿಕೋಪಕ್ಕೆ ಹೋಗಿದೆ. ಈ ವೇಳೆ ಮಂಗಳಮುಖಿ ಪಾರಿ ಮುಖಕ್ಕೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾರೆ. ಗಾಯಾಳು ಮಂಗಳಮುಖಿ ಪಾರಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೈಸೂರಿನ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








