ರಾಯಚೂರು : ಪ್ರಾಣೀ ಪ್ರಿಯರಿಗೆ ಬಿಗ್ ಶಾಕ್, ರಾಯಚೂರಿನಲ್ಲಿ ಬೆಕ್ಕುಗಳಿಗೆ ಮಾರಣಾಂತಿಕ ಎಫ್ಪಿವಿ ವೈರಸ್ ದೃಢಪಟ್ಟಿದ್ದು, 100 ಕ್ಕೂ ಬೆಕ್ಕುಗಳು ಹೊಸ ವೈರಸ್ ಗೆ ಬಲಿಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ.
ರಾಜ್ಯದೆಲ್ಲೆಡೆ ಈಗ ಬೆಕ್ಕುಗಳಿಗೆ ವಕ್ಕರಿಸಿದ ಮಾರಣಾಂತಿಕ ಎಫ್ಪಿವಿ ವೈರಸ್ ಸೋಂಕು ದೃಢಪಟ್ಟಿದೆ. ಹೀಗಾಗಿ ಮನೆಗಳಲ್ಲಿ ಬೆಕ್ಕು ಸಾಕುತ್ತಿರುವವರು ಸಾಕಷ್ಟು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.
ಸೋಂಕಿನಿಂದಾಗಿ ರಾಯಚೂರು ಜಿಲ್ಲೆಯಲ್ಲಿ ಬೆಕ್ಕುಗಳು ಸಾವನ್ನಪ್ಪುತ್ತಿವೆ. ರಾಯಚೂರಿನಲ್ಲಿ ಕಳೆದ ಒಂದು ತಿಂಗಳಲ್ಲಿ 100 ಕ್ಕೂ ಹೆಚ್ಚು ಬೆಕ್ಕುಗಳಲ್ಲಿ ವೈರಾಣು ಪತ್ತೆಯಾಗಿದೆ. ವೈರಸ್ ಸೋಂಕು ತಗುಲಿದಲ್ಲಿ ಬೆಕ್ಕುಗಳು ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ. ಸೋಂಕು ತಗುಲಿದೆ 100 ಬೆಕ್ಕುಗಳಲ್ಲಿ 99 ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.