ಹೈದ್ರಾಬಾದ್ : ಇತ್ತೀಚಿಗೆ ಆನ್ ಲೈನ್ ಗೇಮ್ ನಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಿದ್ದು, ಇದೀಗ ಹೈದ್ರಾಬಾದ್ ನಲ್ಲಿ 23 ವರ್ಷದ ಯುವಕನೊಬ್ಬ ಆನ್‌ಲೈನ್ ಗೇಮಿಂಗ್ ಆದ ಲುಡೋದಲ್ಲಿ ಸುಮಾರು 5 ಲಕ್ಷ ರೂ. ಹಣವನ್ನು ಕಳೆದುಕೊಂಡ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಆನ್‌ಲೈನ್ ಗೇಮಿಂಗ್ ಅಪ್ಲಿಕೇಶನ್‌ನಲ್ಲಿ ಲುಡೋ ಗೇಮ್‌ನಲ್ಲಿ ಭಾರೀ ಹಣ ಕಳೆದುಕೊಂಡ ನಂತರ ಆ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆಗೆ ಶರಣಾದ ಯುವಕನನ್ನು ಗಡ್ಡಮೀಡಿ ವೆಂಕಟೇಶ್ (23) ಎಂದು ಗುರುತಿಸಲಾಗಿದ್ದು, ರೋಸ್ಟ್ ಕೆಫೆಯಲ್ಲಿ ಕೆಲಸ ಮಾಡುತ್ತಿದ್ದ.ವೆಂಕಟೇಶ್ ಮೂಲತಃ ಮಹಬೂಬ್‌ನಗರ ಜಿಲ್ಲೆಯ ನರ್ವಾ ಮಂಡಲದ ಜಕ್ಲರ್ ಗ್ರಾಮದವನು. ಅವನು 4 ವರ್ಷಗಳ ಹಿಂದೆ ಹೈದರಾಬಾದ್‌ಗೆ ತೆರಳಿದ್ದ. ಅಲ್ಲಿ ಅವನು ರೋಸ್ಟ್ ಕೆಫೆಯಲ್ಲಿ ತೋಟಗಾರನಾಗಿ ಕೆಲಸ ಮಾಡುತ್ತಿದ್ದ.
ವೆಂಕಟೇಶ್ ಮೊಬೈಲ್ ಅಪ್ಲಿಕೇಶನ್ ಮೂಲಕ ಲುಡೋ ಆಟವನ್ನು ಆಡುತ್ತಿದ್ದನು. ಅಲ್ಲಿ ಬೆಟ್ಟಿಂಗ್ ಮಾಡಿದ್ದ. ಅವನು ಆಟವಾಡುವಾಗ 5 ಲಕ್ಷ ರೂಪಾಯಿಗಳನ್ನು ಕಳೆದುಕೊಂಡನು. ಅಪಾರ ಆರ್ಥಿಕ ನಷ್ಟದಿಂದ ತೀವ್ರವಾಗಿ ಮನನೊಂದ ಅವನು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರವನ್ನು ತೆಗೆದುಕೊಂಡನು. ಘಟನಾ ಸ್ಥಳಕ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಈ ವಿಷಯದ ಬಗ್ಗೆ ತನಿಖೆ ಆರಂಭಿಸಿದ್ದಾರೆ.