ಮಂಡ್ಯ : ಪೇಂಟ್ ತರಲು ಹೋದ ವ್ಯಕ್ತಿ ಹೃದಯಾಘಾತಕ್ಕೆ ಬಲಿಯಾದ ಘಟನೆ ಮಂಡ್ಯದಲ್ಲಿ ನಡೆದಿದೆ. ಕಾರ್ಡಿಯಾ ಅಟ್ಯಾಕ್ ನಿಂದ ಪೇಂಟ್ ಅಂಗಡಿಯಲ್ಲೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ವ್ಯಕ್ತಿ ಹೃದಯಾಘಾತಕ್ಕೆ ಬಲಿಯಾದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹಲಗೂರು ಪಟ್ಟಣದಲ್ಲಿ ನಡೆದಿರುವ ಘಟನೆ ಇದಾಗಿದ್ದು, ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರಲ್ಲಿ ಹುಲ್ಲಾಗಾಲ ಗ್ರಾಮದ ಈರಣ್ಣಯ್ಯ(58) ಹೃದಯಾಘಾತಕ್ಕೆ ಬಲಿಯಾದ ವ್ಯಕ್ತಿ ಎಂದು ತಿಳಿದುಬಂದಿದೆ.
ಹಲಗೂರಿನ ಪೇಂಟ್ ಅಂಗಡಿಯೊಂದಕ್ಕೆ ತೆರಳಿದ್ದ ಈರಣ್ಣಯ್ಯ. ಈ ವೇಳೆ ಏಕಾಏಕಿ ನಿಂತಲ್ಲೆ ಕುಸಿದು ಬಿದ್ದಿದ್ದಾರೆ. ಅಂಗಡಿ ಮಾಲೀಕ ಈರಣ್ಣ ಅವರನ್ನ ಮೇಲೆತ್ತುವಷ್ಟರಲ್ಲಿ ಸ್ಥಳದಲ್ಲೆ ಈರಣ್ಣಯ್ಯ ಸಾವನ್ನಪ್ಪಿದ್ದಾರೆ. ಈ ಕುರಿತು ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








