ಹೈದ್ರಾಬಾದ್ : ಕಳೆದ ಕೆಲವು ದಿನಗಳ ಹಿಂದೆ ರಾಜ್ಯದ ಹಾಸನ ಜಿಲ್ಲೆಯ ಒಂದರಲ್ಲಿ ಸರಣಿ ಹೃದಯಾಘಾತಕ್ಕೆ ಸುಮಾರು 45ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಅಲ್ಲದೆ ವಿವಿಧ ಜಿಲ್ಲೆಗಳನ್ನು ಕೂಡ ಸರಣಿ ಹೃದಯಾಘಾತದಿಂದ ಅನೇಕರು ಸಾವನಪ್ಪಿದ್ದ ಘಟನೆಗಳು ನಡೆದಿದೆ. ಇದೀಗ ಹೈದರಾಬಾದ್ ನಲ್ಲಿ ಕೋರ್ಟ್ ಆವರಣದಲ್ಲಿ ವಕೀಲ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಹೌದು ತೆಲಂಗಾಣದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಹೈಕೋರ್ಟ್ ಆವರಣದಲ್ಲಿ ವಕೀಲರೊಬ್ಬರು ಹೃದಯಾಘಾತದಿಂದ ಹಠಾತ್ತನೆ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಈ ವಿಡಿಯೋದಲ್ಲಿ ವಕೀಲರೊಬ್ಬರು ಬೆಂಚ್ ಮೇಲೆ ಕುಳಿತಿದ್ದರು ಅಲ್ಲೇ ಕುಸಿದುಬಿದ್ದಿದ್ದಾರೆ.
ಅವರು ಅಲ್ಲಿ ಕಳಿತುಕೊಂಡಯ ಎಷ್ಟು ಸಮಯವಾಗಿತ್ತು ಎಂಬುದು ತಿಳಿದುಬಂದಿಲ್ಲ. ಯಾವಾಗ ಅವರ ಕೈಯಲ್ಲಿದ್ದ ಮೊಬೈಲ್ ಕೆಳಗೆ ಬಿತ್ತೋ ಆಗ ಅಲ್ಲಿದ್ದವರು ಓಡಿ ಹೋಗಿ ನೋಡಿದಾಗ ಅಷ್ಟರಲ್ಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಮೃತರನ್ನು ಖಮ್ಮಂ ಜಿಲ್ಲೆಯ ಸಿಂಗರೇಣಿ ಮಂಡಲದ ಗೇಟ್ ಕರೆಪಲ್ಲಿ ಗ್ರಾಮದ ನಿವಾಸಿ 45 ವರ್ಷದ ಪರಸಾ ಅನಂತ ನಾಗೇಶ್ವರ ರಾವ್ ಎಂದು ಗುರುತಿಸಲಾಗಿದೆ.