ಉಡುಪಿ : ರಾಜ್ಯದಲ್ಲಿ ಹೃದಯಘಾತಕ್ಕೆ ಮತ್ತೊಂದು ಬಲಿಯಾಗಿದ್ದು, ಯಕ್ಷಗಾನ ವೇಷಧಾರಿ ಈಶ್ವರ ಗೌಡ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಈಶ್ವರ ಗೌಡ ಮಂದಾರ್ತಿ ಮೇಳದ ಕಲಾವಿದರಾಗಿದ್ದರು. ಮಂದಾರ್ತಿ ಎರಡನೇ ಮೇಳದಲ್ಲಿ ಮಹಿಷಾಸುರ ಪಾತ್ರ ಮಾಡುತ್ತಿದ್ದರು. ರಾತ್ರಿ ಪಾತ್ರ ಮುಗಿಸಿ ವೇಷ ಕಳಚುತ್ತಿದ್ದಂತೆ ಅಸ್ವಸ್ಥರಾಗಿದ್ದರು. ಆಸ್ಪತ್ರೆಗೆ ದಾಖಲಿಸುವ ವೇಳೆ ಕೊನೆಯುಸಿರೆಳೆದಿದ್ದಾರೆ. ಈಶ್ವರ ಗೌಡ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮಂದಾರ್ತಿ ಮೇಳದಲ್ಲಿ ಈಶ್ವರ ಗೌಡ ಅವರ ತಂದೆ ಕೂಡ ಹಿರಿಯ ವೇಷಧಾರಿಯಾಗಿದ್ದು, ಪ್ರತಿ ಪ್ರದರ್ಶನದಲ್ಲೂ ಚೌಕಿಯಲ್ಲಿ ತಂದೆಯ ಆಶೀರ್ವಾದ ಪಡೆದು ನಂತರವೇ ಮಗ ಪಾತ್ರ ನಿರ್ವಹಿಸುತ್ತಿದ್ದರು. ನಿನ್ನೆ ಕೂಡ ಪ್ರದರ್ಶನಕ್ಕೂ ಮುನ್ನ ಕೊನೆಯ ತಂದೆಯ ಕಾಲು ಮುಟ್ಟಿ ನಮಸ್ಕರಿಸಿ, ಮಹಿಷಾಸುರನ ಪಾತ್ರ ಪಾತ್ರ ನಿರ್ವಹಿಸಿದ್ದರು.ಆದರೆ ಪಾತ್ರ ಮುಗಿಸಿ, ತಂದೆಯ ಬಳಿ ಮರಳಿ ಬರುವ ಮೊದಲೇ ಈಶ್ವರ ಗೌಡ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.







