ಕಲಬುರ್ಗಿ : ರಾಜ್ಯದಲ್ಲಿ ಹೃದಯಾಘಾತಕ್ಕೆ ಇದೀಗ ಮತ್ತೊಂದು ಬಲಿಯಾಗಿದೆ. ಕರ್ತವ ನಿರತ ಹೆಡ್ ಕಾನ್ಸ್ಟೇಬಲ್ ಒಬ್ಬರು ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೆಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಳಖೆಡ ಠಾಣೆಯ ಹೆಡ್ ಕಾನ್ಸ್ಟೇಬಲ್ ಮನೋಹರ್ ಪವಾರ್ (46) ಸಾವನ್ನಪ್ಪಿದ್ದಾರೆ. ನಿನ್ನೆ ಕರ್ತವ್ಯದ ಮೇಲೆ ಸೇಡಂ ಪಟ್ಟಣಕ್ಕೆ ಮನೋಹರ ಆಗಮಿಸಿದ್ದರು ಈ ವೇಳೆ ಹೃದಯಘಾತದಿಂದ ಹೆಡ್ ಕಾನ್ಸ್ಟೇಬಲ್ ಮನೋಹರ್ ಸಾವನಪ್ಪಿದ್ದಾರೆ ಎಂದು ತಿಳಿದುಬಂದಿದೆ.