ಹಾಸನ : ರಾಜ್ಯದಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಹಾಸನ ಮೂಲದ ವ್ಯಕ್ತಿಯೊಬ್ಬ ಬಸ್ ನಲ್ಲಿ ಪ್ರಯಾಣಿಸುವಾಗಲೇ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.
ಹಾಸನ ಜಿಲ್ಲೆಯ ದೊಡ್ಡಮಂಡಿಗನಹಳ್ಳಿಯ ವೆಂಕಟೇಶ್ (55) ಮೃತ ದುರ್ದೈವಿಯಾಗಿದ್ದು, ಬೆಂಗಳೂರು ಸಮೀಪದ ಸೋಲೂರಿನಲ್ಲಿ ನಿನ್ನೆ ಸಂಜೆ ಘಟನೆ ನಡೆದಿದೆ.
ಕಳೆದ 3 ವರ್ಷಗಳಿಂದ ಬಿಪಿ ಸಮಸ್ಯೆಯಿಂದ ಬಳಲುತ್ತಿದ್ದ ವೆಂಕಟೇಶ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಹಾಸನಕ್ಕೆ ಮೃತದೇಹ ರವಾನಿಸಲಾಗುತ್ತಿದೆ.