ಕಲಬುರ್ಗಿ : ಕಳೆದ ಒಂದುವರೆ ತಿಂಗಳಿನಿಂದ ರಾಜ್ಯದಲ್ಲಿ ಹಾಸನ ಜಿಲ್ಲೆ ಒಂದರಲ್ಲಿ 40ಕ್ಕೂ ಹೆಚ್ಚು ಜನರು ಹೃದಯಘಾತಕ್ಕೆ ಬಲಿಯಾಗಿದ್ದಾರೆ. ಆದರೆ ಈ ಒಂದು ಹೃದಯಘಾತ ಹಾಸನ ಜಿಲ್ಲೆ ಅಷ್ಟೇ ಸೀಮಿತವಾಗದೆ, ವಿವಿಧ ಜಿಲ್ಲೆಗಳಲ್ಲೂ ಇದೀಗ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಇದೀಗ ಹಿಂದೂ ಕಲ್ಬುರ್ಗಿಯಲ್ಲಿ ಮದುವೆಯಾದ ಒಂದೇ ವಾರಕ್ಕೆ ಹೃದಯಘಾತದಿಂದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಹೌದು ಕಲ್ಬುರ್ಗಿಯಲ್ಲಿ ಹೃದಯಾಘಾತಕ್ಕೆ ಯುವಕನೊಬ್ಬ ಬಲಿಯಾಗಿದ್ದಾನೆ ಮೋಹಸೀನ್ ಪಟೇಲ್ (22) ಮೃತ ಯುವಕ ಎಂದು ತಿಳಿದುಬಂದಿದ್ದು, ಚಿಂಚೋಳಿ ತಾಲೂಕಿನ ಚಂದನಕೆರಾ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಮದುವೆಯಾಗಿ ಒಂದೇ ವಾರದಲ್ಲೇ ಯುವಕ ಹೃದಯಘಾತಕ್ಕೆ ಬಲಿಯಾಗಿದ್ದಾನೆ. ಲಾರಿ ಚಾಲಕನಾಗಿ ಮೋಹಸೀನ್ ಪಟೇಲ್ ಕೆಲಸ ಮಾಡುತ್ತಿದ್ದ. ಮೊಹರಂ ಹಬ್ಬಕ್ಕೆ ಎಂದು ಚಂದನಕೆರಾ ಗ್ರಾಮಕ್ಕೆ ತೆರಳಿದ್ದ ಮನೆಯಲ್ಲಿಯೇ ಕುಸಿದು ಬಿದ್ದಿದ್ದ ಮೊಸಿನ್ ಪಟೇಲ್ ನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ.