ಚಾಮರಾಜನಗರ : ಇತ್ತೀಚಿಗೆ ರಾಜ್ಯದಲ್ಲಿ ಹೃದಯಾಘಾತಕ್ಕೆ ಸಾವನ ಪುತ್ರುವವರ ಸಂಖ್ಯೆ ಹೆಚ್ಚಿದ್ದು, ಅದರಲ್ಲೂ ಹಾಸನದಲ್ಲಿ ಹೃದಯಾಘಾತದಿಂದ ಕಳೆದ ತಿಂಗಳು ಸರಣಿ ಸಾವುಗಳು ಸಂಭವಿಸಿದವು ಇದೀಗ ಚಾಮರಾಜನಗರದಲ್ಲಿ ನಾಲ್ಕನೇ ತರಗತಿ ಬಾಲಕನೊಬ್ಬ ಹೃದಯಘಾತಕ್ಕೆ ಬಲಿಯಾಗಿದ್ದಾನೆ.
ಹೌದು ಚಾಮರಾಜನಗರ ತಾಲೂಕಿನ ಕುಲಗಾಣ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದ್ದು ಕುಲಗಾಣ ಗ್ರಾಮದ ಮೂರ್ತಿ ಮತ್ತು ಮಹೇಶ್ವರಿ ದಂಪತಿಯ ಪುತ್ರ ಉಲ್ಲಾಸ್ ಬೇಗೂರಿನ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದ ಬಾಲಕ ಉಲ್ಲಾಸ ಆರೋಗ್ಯವಾಗಿಯೇ ಇದ್ದ. ಇದೀಗ ಹೃದಯಾಘಾತಕ್ಕೆ ಉಲ್ಲಾಸ್ ಬಲಿಯಾಗಿದ್ದಾನೆ.