ಉಡುಪಿ : ರಾಜ್ಯದಲ್ಲಿ ಹೃದಯಾಘಾತದಿಂದ ಸರಣಿ ಸಾವುಗಳು ಮುಂದುವರೆದಿದ್ದು ಇದೀಗ ಶಾಲಾ ವಾಹನ ಚಲಾಯಿಸುತ್ತಿರುವಾಗಲೇ ಚಾಲಕರೊಬ್ಬ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಶಾಲಾ ವಾಹನ ಚಾಲಕ ಹೃದಯಘಾತದಿಂದ ಸಾವನ್ನಪ್ಪಿದ್ದಾನೆ ಅದೃಷ್ಟವಶಾತ್ ಶಾಲಾ ವಾಹನದಲ್ಲಿದ್ದ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರ್ಕಳ ನೀರೇ ಬೈಲೂರು ನಿವಾಸಿ ಮೋಹಿನಿದ್ದೀನ್ ಬಾವಾ (65) ಸಾವನಪ್ಪಿದ್ದಾರೆ. ಉಡುಪಿ ನಗರದ ಮಾರುತಿ ವಿಥಿಕ ಬಳಿ ಈ ಒಂದು ಘಟನೆ ನಡೆದಿದ್ದು ಚಾಲಕನ ಸಮಯಪ್ರಜ್ಞೆಯಿಂದ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ವಾಹನ ಚಾಲನೆ ವೇಳೆಯೇ ಮೊಯಿದ್ದೀನ್ ಗೆ ಎದೆನೋವು ಕಾಣಿಸಿಕೊಂಡಿತ್ತು. ಸಮಾಜ ಸೇವಕ ನಿತ್ಯಾನಂದರನ್ನು ಕಂಡು ಚಾಲಕ ವಾಹನ ನಿಲ್ಲಿಸಿದ್ದಾನೆ. ಎದೆ ನೋವಿನ ಬಗ್ಗೆ ನಿತ್ಯಾನಂದ ಒಳಕಾಡು ಬಳಿ ಚಾಲಕ ಹೇಳಿಕೊಂಡಿದ್ದಾನೆ. ತಕ್ಷಣ ಆಸ್ಪತ್ರೆಗೆ ನಿತ್ಯಾನಂದ ಒಳಕಾಡು ಸಾಗಿಸಿದ್ದಾರೆ. ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯೆ ಚಾಲಕ ಮೃತಪಟ್ಟಿದ್ದಾನೆ.