ಬೆಳಗಾವಿ ::ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು ಬೆಳಗಾವಿಯಲ್ಲಿ ತಂದೆ ಒಬ್ಬ ಹೆತ್ತ ಮಗನ ಕುತ್ತಿಗೆಗೆ ವೈರಿನಿಂದ ಬಿಗಿದು ಕೊಲೆ ಮಾಡಿದ್ದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಇಂದ್ರ ನಗರದಲ್ಲಿ ಈ ಒಂದು ಭೀಕರ ಕೊಲೆ ನಡೆದಿದೆ. ಕೊಲೆಯ ಬಳಿಕ ಬೆಂಕಿಯಲ್ಲಿ ಮಗನನ್ನು ಸುಟ್ಟು ಹಾಕಿ ಸಾಕ್ಷಿ ನಾಶಪಡಿಸಲು ಯತ್ನಿಸಿರುವ ಘಟನೆ ನಡೆದಿದೆ.
ಕೊಲೆಯಾದ ಕಿರಣ್ ಆಲೂರು (31) ಸ್ನೇಹಿತರಿಂದ ಕೊಲೆ ರಹಸ್ಯ ಬೆಳಕಿಗೆ ಬಂದಿದೆ. ಪುತ್ರ ಕಿರಣ್ ನನ್ನ ತಂದೆ ನಿಜಗುಣಿ ಆಲೋರೆ ಕೊಲೆ ಮಾಡಿದ್ದಾನೆ. ಹೋಟೆಲ್ ಮಾಲೀಕ ಉಸ್ಮನ್ ಮುಲ್ಲಾ ಜೊತೆ ಸೇರಿಕೊಂಡು ಮಗನನ್ನು ನಿಜಗುಣಿ ಕೊಲೆ ಮಾಡಿದ್ದಾನೆ. ಉಸ್ಮಾನ್ ಹೋಟೆಲ್ ನಲ್ಲಿ ನಿಜಗುನಿ ಕೆಲಸ ಮಾಡುತ್ತಿದ್ದ ಇಬ್ಬರು ಸೇರಿಕೊಂಡು ಕಾರಿನಲ್ಲಿ ಶವ ತೆಗೆದುಕೊಂಡು ತಿರುಗಾಡಿದ್ದಾರೆ. ಬಳಿಕ ಹೃದಯಾಘಾತದಿಂದ ಮಗನ ಸಾವಾಗಿದೆ ಎಂದು ತಂದೆ ನಿಜಗುಣಿ ನಾಟಕ ಮಾಡಿದ್ದಾನೆ.
ಪುತ್ರ ಕಿರಣ್ ಗೆಳೆಯರಿಗೆ ಕರೆ ಮಾಡಿ ನಿಜಗುಣಿ ವಿಷಯ ತಿಳಿಸಿದ್ದಾನೆ. ತರಾತುರಿಯಲ್ಲಿಯೇ ಕಿರಣ್ ಶವವನ್ನು ಸುಟ್ಟುಹಾಕಲು ತಂದೆ ಮುಂದಾಗಿದ್ದಾನೆ. ಹೂಳುವುದನ್ನು ಬಿಟ್ಟು ಸುಡಲು ಮುಂದಾಗಿದ್ದಕ್ಕೆ ಕಿರಣ್ ಸಾವಿನ ಬಗ್ಗೆ ಆತನ ಸ್ನೇಹಿತರಿಗೆ ಅನುಮಾನ ಬಂದಿತ್ತು. ನಿಜಗುಣಿ ಕೆಲಸ ಮಾಡುತ್ತಿದ್ದ ಹೋಟೆಲ್ ಮಾಲೀಕನನ್ನು ವಿಚಾರಣೆ ಮಾಡಲಾಗಿದ್ದು ಕೊಲೆಯ ರಹಸ್ಯ ಬೆಳಕಿಗೆ ಬಂದಿದೆ. ಕೂಡಲೇ ನಿಜಗುಣಿಯನ್ನು ಕಿರಣ್ ಸ್ನೇಹಿತರು ಸ್ಮಶಾನಕ್ಕೆ ಕರೆಸಿಕೊಂಡಿದ್ದಾರೆ. ಈ ವೇಳೆ ನಿಜಗುಣಿ ತಾನೇ ಕೊಲೆ ಮಾಡಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾನೆ. ತಕ್ಷಣ ಕಿರಣ್ ಸ್ನೇಹಿತರು ಚಿಕ್ಕೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








