ಬೆಳಗಾವಿ : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಕೃತ್ಯ ನಡೆದಿದ್ದು, ಪತ್ನಿ ಕೊಂದು ಶವವನ್ನು ಮಂಚದೊಳಗಿಟ್ಟು ಬೆಡ್ ಮುಚ್ಚಿ ಪತಿ ಪರಾರಿ ಆಗಿದ್ದಾನೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ಪತ್ನಿಯನ್ನು ಕೊಂದು ಪತಿ ಪರಾರಿಯಾಗಿರುವ ಘಟನೆ ನಡೆದಿದೆ. ಸಾಕ್ಷಿ ಕಂಬಾರ(20) ಕೊಲೆಯಾದ ಪತ್ನಿ. ಆಕಾಶ್ ಪರಾರಿಯಾಗಿರುವ ಪತಿ. 4 ತಿಂಗಳ ಹಿಂದೆಯಷ್ಟೇ ಆಕಾಶ್ ಮತ್ತು ಸಾಕ್ಷಿ ಕಂಬಾರ ಮದುವೆ ಆಗಿತ್ತು. ಮೂರು ದಿನದ ಹಿಂದೆ ಸಾಕ್ಷಿ ಕಂಬಾರ ಕೊಂದು ಮಂಚದೊಳಗೆ ಶವ ಬಚ್ಚಿಟ್ಟು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಆಕಾಶ್ ಪರಾರಿ ಆಗಿದ್ದಾನೆ.
ಸದ್ಯ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗೋಕಾಕ್ ಡಿವೈಎಸ್ಪಿ ಭೇಟಿ ನೀಡಿ ಪರೀಶಿಲನೆ ಮಾಡಿದ್ದಾರೆ. ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.