ಬರೇಲಿ : ದೇಶದಲ್ಲಿ ಮತ್ತೊಂದು ಅಮಾನವೀಯ ಘಟನೆಯೊಂದು ನಡೆದಿದ್ದು, ಋತುಚಕ್ರ ಆದ ವಿದ್ಯಾರ್ಥಿನಿಯನ್ನು ಶಾಲೆಯ ಹೊರಗೆ ನಿಲ್ಲಿಸಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಉತ್ತರ ಪ್ರದೇಶದ ಬರೇಲಿಯಲ್ಲಿ ಬಾಲಕಿಯರ ಶಾಲೆ ಕಾರ್ಯನಿರ್ವಹಿಸುತ್ತಿದೆ. ಈ ಶಾಲೆಯಲ್ಲಿ 11 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯೊಬ್ಬಳಿಗೆ ಋತುಚಕ್ರವಾಯಿತು. ವಿದ್ಯಾರ್ಥಿನಿ ತನ್ನ ಋತುಚಕ್ರದ ದಿನದಂದು ಶಾಲೆಗೆ ಹೋಗಿ ಸ್ಯಾನಿಟರಿ ನ್ಯಾಪ್ಕಿನ್ ಕೇಳಿದಳು. ವಿದ್ಯಾರ್ಥಿನಿ ಶಾಲೆಯ ಪ್ರಾಂಶುಪಾಲರಲ್ಲಿ ನ್ಯಾಪ್ಕಿನ್ ಕೇಳಿದಳು, ಆದರೆ ಪ್ರಾಂಶುಪಾಲರು ಆಕೆಯನ್ನು ತರಗತಿಯ ಹೊರಗೆ ಒಂದು ಗಂಟೆ ನಿಲ್ಲುವಂತೆ ಮಾಡಿದರು.
ಈ ಸಂಬಂಧ ಸಂತ್ರಸ್ತ ವಿದ್ಯಾರ್ಥಿನಿಯ ತಂದೆ ಜಿಲ್ಲಾ ನ್ಯಾಯಾಲಯ, ಜಿಲ್ಲಾ ಶಾಲಾ ನಿರೀಕ್ಷಕರು, ರಾಜ್ಯ ಮಹಿಳಾ ಆಯೋಗ ಮತ್ತು ಮಹಿಳಾ ಕಲ್ಯಾಣ ಇಲಾಖೆಗೆ ಪತ್ರ ಬರೆದಿದ್ದಾರೆ. ಈ ವಿಷಯ ರಾಜ್ಯದಲ್ಲಿ ಪ್ರಮುಖ ಸಮಸ್ಯೆಯಾಗಿ ಮಾರ್ಪಟ್ಟಿರುವುದರಿಂದ, ತನಿಖೆ ನಡೆಯುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.