ತುಮಕೂರು : ರಾಜ್ಯದಲ್ಲಿ ಮತ್ತೊಂದು ಘೋರ ಘಟನೆ ನಡೆದಿದ್ದು, ಮನೆಯ ಮುಂದಿರುವ ನೀರಿನ ಸಂಪ್ ಗೆ ತಾಯಿಯೊಬ್ಬಳು ತನ್ನ ಅವಳಿ ಮಕ್ಕಳನ್ನು ತಳ್ಳಿ, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ತುಮಕೂರಿನ ಹಿರೇಹಳ್ಳಿ ಸಂಗನಹಳ್ಳಿ ಕಾಲೋನಿಯಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಮೃತರನ್ನು ವಿಜಯಲಕ್ಷ್ಮಿ (26), 5 ವರ್ಷದ ಅವಳಿ ಮಕ್ಕಳಾದ ಚೇತನ ಮತ್ತು ಚೈತನ್ಯ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಮೃತದೇಹಗಳನ್ನು ಹೊರ ತೆಗೆದಿದ್ದಾರೆ.
ಆತ್ಮಹತ್ಯೆಗೆ ಕೌಟುಂಬಿಕ ಕಲಹವೇ ಕಾರಣ ಎನ್ನಲಾಗಿದೆ. ವಿಜಯಲಕ್ಷ್ಮಿ ಗಂಡ ಸಂಪತ್ ಕುಮಾರ್ ನೆಲಮಂಗಲ ಬಳಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಕೆಲ ವರ್ಷಗಳಿಂದ ಸಿಂಗೋನಹಳ್ಳಿಯಲ್ಲಿ ನೆಲೆಸಿದ್ದರು. ಮೂಲತಹ ನೆಲಮಂಗಲ ತಾಲ್ಲೂಕು ದಾಬಸ್‌ಪೇಟೆ ಹೋಬಳಿ ಶಿವಗಂಗೆಯ ಕೊಟ್ಟಿಗೆರೆ ಗ್ರಾಮದವರು.








