ಬೆಂಗಳೂರು : ಇತ್ತೀಚಿಗೆ ರಾಜ್ಯದಲ್ಲಿ ಹಸುಗಳ ಮೇಲೆ ರಾಕ್ಷಸರು ಕ್ರೌರ್ಯ ಮೆರೆಯುತ್ತಿದ್ದು, ಬೆಂಗಳೂರು ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಸುಗಳ ಬಾಲ ಕತ್ತರಿಸಿದ್ದು ಅಲ್ಲದೆ, ಹಸುಗಳ ರುಂಡ ಮುಂಡ ಬೇರ್ಪಡಿಸಿ ಭಯ ಆಗುತ್ತೆ ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಕೂಡ ಹಸುಗಳ ಕುತ್ತಿಗೆ ಕೊಯ್ದು ಕ್ರೌರ್ಯ ಮರೆದಿದ್ದಾರೆ.
ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಹೇಸಿಗೆ ಕೃತ್ಯ ನಡೆದಿದ್ದು ಹಸುಗಳ ಕತ್ತು ಕೊಯ್ದು ರಸ್ತೆಯಲ್ಲಿ ಬಿಸಾಡಲಾಗಿದೆ. ಅರಳಸಂದ್ರ ಗ್ರಾಮದ ಸೇತುವೆ ಮೇಲೆ ಎರಡು ನಾಟಿ ಹಸುಗಳ ಮೃತದೇಹ ಪತ್ತೆಯಾಗಿದೆ. ಇದು ಚಿರತೆ ದಾಳಿಯಿಂದ ಆಗಿರುವುದು ಅಲ್ಲ ಯಾರೋ ಕಿಡಿಗೇಡಿಗಳ ಕೃತ್ಯ ಎಂದು ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದ್ದಾರೆ.