ಕೊಪ್ಪಳ : ರಾಜ್ಯದಲ್ಲಿ ಮತ್ತೊಂದು ರಾಕ್ಷಸಿ ಕೃತ್ಯ ನಡೆದಿದ್ದು, ದೇವರಿಗೆ ಬಿಟ್ಟ ಗೋವಿನ ಕಾಲು ಕಡಿದು ಪಾಪಿಗಳು ಅಟ್ಟಹಾಸ ಮೆರೆದಿದ್ದಾರೆ.
ಕೊಪ್ಪಳ ಜಿಲ್ಲೆಯ ಯಲಬುರ್ಗ ತಾಲೂಕಿನ ಮಾಟರಂಗಿ ಗ್ರಾಮದಲ್ಲಿ ದೇವರಿಗೆ ಬಿಟ್ಟಿದ್ದ ಗೋವಿನ ಕಾಲು ಕಡಿದು ಪಾಪಿಗಳು ಅಟ್ಟಹಾಸ ಮೆರೆದಿದ್ದಾರೆ.
ಮಾತರಂಗಿ ಗ್ರಾಮದ ಮಹಂತೇಶ್ವರ ದೇವರಿಗೆ ಬಿಡಲಾಗಿದ್ದ ಗೋವಿನ ಕಾಲುಗಳನ್ನು ಕಡಿದು ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಜಮೀನಿನಲ್ಲಿ ಗೋವು ಮೇಯಲು ಹೋಗಿತ್ತು. ಇದರಿಂದ ಸಿಟ್ಟಿಗೆದ್ದ ಕಿಡಿಗೇಡಿಗಳು ಕೊಡಲಿಯಿಂದ ಕಡಿದಿದ್ದಾರೆ. ಜಮೀನ ಮಾಲೀಕ ರಮೇಶ್ ಎಂಬಾತಾನೆ ಕಾಲು ಕಡಿದಿದ್ದಾನೆ ಎಂದು ಆರೋಪಿಸಲಾಗಿದೆ.








