ಚಿಕ್ಕಮಗಳೂರು : ರಾಜ್ಯದಲ್ಲಿ ಮತ್ತೊಂದು ರಾಕ್ಷಸಿ ಕೃತ್ಯ ನಡೆಸಿದ್ದು, ಚಿಕ್ಕಮಗಳೂರಿನಲ್ಲಿ ಮಾಂಸಕ್ಕಾಗಿ ಗಬ್ಬದ ಹಸು ಕಡಿದಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಎಸ್ಟೇಟ್ ವೊಂದರಲ್ಲಿ ಅಸ್ಸಾಂ ಮೂ ಲದ ಕಾರ್ಮಿಕರು ಮಾಂಸಕ್ಕಾಗಿ ಗಬ್ಬದ ಹಸುವನ್ನು ಕಡಿದು ಅಂಗಾಂಗಗಳನ್ನು ಮಣ್ಣಿನಲ್ಲಿ ಹೂಳಲು ಯತ್ನಿಸಿದ್ದಾರೆ. ಕೃತ್ಯ ಎಸ ಗಿದ ಎಲ್ಲ ಕೂಲಿ ಕಾರ್ಮಿಕರನ್ನು ಬಂಧಿಸಲಾಗಿದೆ.
ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿ ನಿಡುವಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಮರ್ಕಲ್ ಎಸ್ಟೇಟ್ನಲ್ಲಿ ಘಟನೆ ನಡೆದಿದೆ. ಮಾಂಸಕ್ಕಾಗಿ ಗಬ್ಬದ ಹಸುವನ್ನೇ ಅಮಾನವೀಯವಾಗಿ ಕೊಂದಿದ್ದ 6 ಅಸ್ಸಾಂ ಮೂಲದ ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದಾರೆ.