ಕಲಬುರ್ಗಿ : ಇಂದು ಬೆಳಿಗ್ಗೆ ತಾನೇ ತುಮಕೂರು ಜಿಲ್ಲೆಯಲ್ಲಿ ಹೃದಯಾಘಾತದಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಒಬ್ಬ ಸಾವನ್ನಪ್ಪಿರುವ ಘಟನೆ ವರದಿಯಾಗಿತ್ತು. ಇದರ ಬೆನ್ನಲ್ಲೇ ಈಗ ಕಲ್ಬುರ್ಗಿಯಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಒಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕಲ್ಬುರ್ಗಿ ನಗರದಲ್ಲಿ ನಡೆದಿದೆ.
ಹೌದು ಹೃದಯಾಘಾತದಿಂದ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು ಕಲ್ಬುರ್ಗಿ ಗಂಗಾನಗರ ನಿವಾಸಿ ರವಿಕುಮಾರ್ (19) ಎನ್ನುವ ವಿದ್ಯಾರ್ಥಿ ಹೃದಯಘಾತದಿಂದ ಸಾವನ್ನಪ್ಪಿದ್ದಾನೆ.ಬೆಳಿಗ್ಗೆ ಮನೆಯಲ್ಲಿ ಕಲ್ಬುರ್ಗಿ ಪಿಡಿಎ ಇಂಜಿನಿಯರ್ ಕಾಲೇಜಿನಲ್ಲಿ ರವಿಕುಮಾರ್ 4ನೇ ಸೆಮಿಸ್ಟರ್ನಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಇಂದು ಮನೆಯಲ್ಲಿ ಇದ್ದಾಗಲೇ ಹೃದಯಾಘಾತದಿಂದ ಕುಸಿದು ಬಿದ್ದು ವಿದ್ಯಾರ್ಥಿ ರವಿಕುಮಾರ್ ಸಾವನ್ನಪ್ಪಿದ್ದಾನೆ.