ತುಮಕೂರು : ಇತ್ತೀಚಿಗೆ ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಅದರಲ್ಲೂ ಯುವಜನತೆಗೆ ಈ ಒಂದು ಹೃದಯಾಘಾತ ಎನ್ನುವುದು ಸಾಮಾನ್ಯವಾದ ಕಾಯಿಲೆ ಆಗಿಬಿಟ್ಟಿದೆ. ಇದೀಗ ಇಂದು ತುಮಕೂರಿನಲ್ಲಿ ಸಚಿವ ಕೆಎನ್ ರಾಜಣ್ಣ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ಒಂದು ಸಮಾರಂಭ ಮುಗಿಸಿ ಮನೆಗೆ ತೆರಳುವಾಗ ಮಹಿಳೆಯೋಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಹೌದು ಸಚಿವ ಕೆ.ಎನ್ ರಾಜಣ್ಣ ಅಭಿನಂದನಾ ಸಮಾರಂಭದ ಬಳಿಕ ಮಹಿಳೆಗೆ ಹೃದಯಘಾತವಾಗಿದ್ದು, ಹೃದಯಾಘಾತದಿಂದ ಸೀಗೇಹಳ್ಳಿ ನಿವಾಸಿ ಸುನಂದಮ್ಮ ಸಾವನ್ನಪ್ಪಿದ್ದಾರೆ. ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಸೀಗೆಹಳ್ಳಿ ನಿವಾಸಿಯಾಗಿರುವ ಸುನಂದಮ್ಮ ಅವರು ಅಭಿನಂದನಾ ಸಮಾರಂಭ ಮುಗಿಸಿ ಬಸ್ ನಲ್ಲಿ ತೆರಳುವಾಗ ಈ ಒಂದು ಘಟನೆ ನಡೆದಿದೆ. ತುಮಕೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಈ ಒಂದು ಅಭಿನಂದನಾ ಕಾರ್ಯಕ್ರಮ ನಡೆದಿತ್ತು.