ಉಡುಪಿ : ಈ ಸಾವು ಅನ್ನೋದು ಯಾವಾಗ ಹೇಗೆ ಬರುತ್ತೆ ಅಂತ ಹೇಳೋಕೆ ಆಗುವುದಿಲ್ಲ. ಇದೀಗ ಉಡುಪಿಯಲ್ಲಿ ಯಕ್ಷಗಾನ ಕಲಾವಿದರು ಒಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದು, ‘ಮಹಿಷಾಸುರ’ನ ವೇಷ ಕಳಚುತ್ತಿದ್ದಂತೆ ಹೃದಯಾಘಾತದಿಂದ ಯಕ್ಷಗಾನ ಕಲಾವಿದರು ಒಬ್ಬರು ಸಾವನಪ್ಪಿದ್ದಾರೆ.
ಮಂದಾರ್ತಿ ಮೇಳದ ಕಲಾವಿದ ಈಶ್ವರ ಗೌಡ (51) ಮೃತಪಟ್ಟವರು. ಇವರು ಮಂದಾರ್ತಿ ಎರಡನೇ ಮೇಳದಲ್ಲಿ ದೇವಿ ಮಹಾತ್ಮೆ ಪ್ರಸಂಗದಲ್ಲಿ ಮಹಿಷಾಸುರನ ಪಾತ್ರ ಮಾಡುತ್ತಿದ್ದರು. ಪಾತ್ರ ಮುಗಿಸಿ ವೇಷ ಕಳಚುತ್ತಿದ್ದಂತೆ ಅಸ್ವಸ್ಥಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಿ ಅವರು ನಿಧನರಾಗಿದ್ದಾರೆ.
ಮಂದಾರ್ತಿ ಮೇಳದಲ್ಲಿ ಇವರ ತಂದೆಯೂ ವೇಷಧಾರಿಯಾಗಿದ್ದರು. ಚೌಕಿಯಲ್ಲಿ ತಂದೆಯ ಆಶೀರ್ವಾದ ಪಡೆದು ಈಶ್ವರ ಗೌಡ ಪಾತ್ರ ನಿರ್ವಹಿಸಿದ್ದರು. ಯಕ್ಷಗಾನ ಕಲಾವಿದರು ಮತ್ತು ಯಕ್ಷಪ್ರೇಮಿಗಳು ಸಂತಾಪ ಸೂಚಿಸಿದ್ದಾರೆ. ಇಂದು ಶೃಂಗೇರಿ ಸಮೀಪದ ನೆಮ್ಮಾರು ಗ್ರಾಮದ ಬುಕ್ಡಿಬೖಲಿನಲ್ಲಿ ಅಂತ್ಯಕ್ರಿಯೆ ಜರುಗಲಿದೆ. ಈಶ್ವರ ಗೌಡ ಅವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.








