ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೃದಯಘಾತ ಎನ್ನುವುದು ಸಾಮಾನ್ಯ ಕಾಯಿಲೆಯಾಗಿದೆ. ಇದೀಗ ಸ್ಯಾಂಡಲ್ ವುಡ್ ನಟ ದರ್ಶನ್ ಅವರಿಗೆ ಮೇಕಪ್ ಮಾಡುತ್ತಿದ್ದ ಮೇಕಪ್ ಆರ್ಟಿಸ್ಟ್ ಒಬ್ಬರು ಹೃದಯಘಾತದಿಂದ ಸಾವನಪ್ಪಿರುವ ಘಟನೆ ನಡೆದಿದೆ.
ಹೌದು ಕನ್ನಡ ಚಿತ್ರರಂಗದ ಹಿರಿಯ ಮೇಕಪ್ ಕಲಾವಿದರಾದ ಹೊನ್ನೇಗೌಡ (54) ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದರೆ. ಖ್ಯಾತ ನಟ ದರ್ಶನ್ ತೂಗುದೀಪ ಅವರ ಬಹುತೇಕ ಚಿತ್ರಗಳಿಗೆ ಮೇಕಪ್ ಕಲಾವಿದರಾಗಿ ಕೆಲಸ ಮಾಡಿದ್ದರು.
ನಿನ್ನೆ ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗಿಕೊಂಡ ಹೊನ್ನೇಗೌಡ ಅವರಿಗೆ ಹೃದಯಘಾತವಾಗಿದೆ. ಇಂದು ಬೆಳಿಗ್ಗೆ ಅವರು ಮೃತಪಟ್ಟಿರುವುದು ಖಚಿತವಾಗಿದೆ. 2002ರಲ್ಲಿ ನಟ ದರ್ಶನ್ ಅವರ ಮೆಜೆಸ್ಟಿಕ್ ಸಿನಿಮಾದಿಂದ ಹಿಡಿದು ಇವತ್ತಿನ ಡೆವಿಲ್ ಸಿನಿಮಾ ವರೆಗೂ ಬಹುತೇಕ ದರ್ಶನ್ ಅವರ ಎಲ್ಲ ಚಿತ್ರಗಳಲ್ಲೂ ಹೊನ್ನೇಗೌಡ ಮೇಕಪ್ ಕಲಾವಿದರಗಿ ಕೆಲಸ ಮಾಡಿದ್ದರು.