ರಾಯಚೂರು : ಪ್ರೀತಿಯ ವಿಚಾರಕ್ಕೆ ಸಂಬಂಧಪಟ್ಟಂತೆ ಅಪ್ರಾಪ್ತ ಬಾಲಕಿಯನ್ನು ಕಿಡ್ನಾಪ್ ಮಾಡಲು ಮುಂಡದಾಗ ತಡೆಯಲು ವ್ಯಕ್ತಿಯೊಬ್ಬ ಬಂದಿದ್ದಾನೆ. ಈ ವೇಳೆ ಆತನನ್ನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಯಾಪಲ್ ದಿನ್ನಿ ಗ್ರಾಮದಲ್ಲಿ ನಡೆದಿದೆ.
ಯಾಪಲದಿನ್ನಿ ಗ್ರಾಮದ ಈಶಪ್ಪ (30) ಕೊಲೆಯಾದ ದುರ್ದೈವಿ. ಘಟನೆ ನಡೆದ ರಾತ್ರಿ ಈಶಪ್ಪ ತಮ್ಮ ಮನೆಯ ಮಾಳಿಗೆಯ ಮೇಲೆ ಮಲಗಿದ್ದರು. ಈ ವೇಳೆ ಅನ್ಯ ಧರ್ಮದ ಯುವಕ ಅಸ್ಲಂ ಮತ್ತು ಆತನ ಸ್ನೇಹಿತರು ಸೇರಿ 14 ವರ್ಷದ ಅಪ್ರಾಪ್ತ ಬಾಲಕಿಯನ್ನು ಕರೆದೊಯ್ಯುತ್ತಿರುವುದನ್ನು ಈಶಪ್ಪ ಗಮನಿಸಿದ್ದಾರೆ.
ನಡುರಾತ್ರಿ ನಡೆದ ಘೋರ ಕೃತ್ಯ ಘಟನೆ ನಡೆದ ರಾತ್ರಿ ಈಶಪ್ಪ ಅವರು ಎಂದಿನಂತೆ ತಮ್ಮ ಮನೆಯ ಮಾಳಿಗೆಯ ಮೇಲೆ ನಿದ್ದೆ ಮಾಡುತ್ತಿದ್ದರು. ಈ ವೇಳೆ ಅನ್ಯ ಧರ್ಮದ ಯುವಕ ಅಸ್ಲಂ ಮತ್ತು ಆತನ ಸ್ನೇಹಿತರ ತಂಡವೊಂದು 14 ವರ್ಷದ ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಅಪಹರಿಸಲು ಯತ್ನಿಸುತ್ತಿತ್ತು. ನಿದ್ದೆಯಲ್ಲಿದ್ದ ಈಶಪ್ಪ ಅವರು ಕೆಳಗಿನ ಗಲಾಟೆ ಕೇಳಿ ಎಚ್ಚರಗೊಂಡು ನೋಡಿದಾಗ, ಬಾಲಕಿಯನ್ನು ಕಿಡ್ನಾಪ್ ಮಾಡುತ್ತಿರುವುದು ಅವರ ಗಮನಕ್ಕೆ ಬಂದಿದೆ.
ತಡೆಯಲು ಹೋದದ್ದೇ ಪ್ರಾಣಕ್ಕೆ ಕುತ್ತು ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ಬಾಲಕಿಯ ರಕ್ಷಣೆಗೆ ಧಾವಿಸಿದ ಈಶಪ್ಪ, ಅಸ್ಲಂ ಮತ್ತು ಆತನ ತಂಡವನ್ನು ತಡೆಯಲು ಪ್ರಯತ್ನಿಸಿದ್ದಾರೆ. “ಬಾಲಕಿಯನ್ನು ಬಿಟ್ಟುಬಿಡಿ” ಎಂದು ಪ್ರತಿರೋಧ ಒಡ್ಡಿದ್ದೇ ಈಶಪ್ಪ ಅವರ ಪ್ರಾಣಕ್ಕೆ ಕುತ್ತಾಗಿ ಪರಿಣಮಿಸಿದೆ. ಈಶಪ್ಪ ಅಡ್ಡಿಪಡಿಸಿದ್ದರಿಂದ ಆಕ್ರೋಶಗೊಂಡ ಅಸ್ಲಂ ಹಾಗೂ ಆತನ ಸಹಚರರು ಆತನ ಮೇಲೆ ಮಾರಕಾಸ್ತ್ರಗಳಿಂದ ಮನಸೋಇಚ್ಛೆ ದಾಳಿ ನಡೆಸಿದ್ದಾರೆ. ತೀವ್ರ ರಕ್ತಸ್ರಾವದಿಂದಾಗಿ ಈಶಪ್ಪ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಸದ್ಯ ಅನ್ಯಕೋಮಿನ ಯುವಕರಿಂದ ಕಿಡ್ನಾಪ್ ಆಗಿರೋ ಬಾಲಕಿಯ ಮನೆಯ ಮುಂದೆಯೇ ಈಶಪ್ಪನ ಮೃತದೇಹವನ್ನಿಟ್ಟು ಕುಟುಂಬಸ್ಥರು, ನ್ಯಾಯಕ್ಕಾಗಿ ಪಟ್ಟು ಹಿಡಿದಿದ್ದಾರೆ. ತಪ್ಪಿತಸ್ಥರನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಘಟನಾ ಸ್ಥಳದಲ್ಲೇ ಪ್ರತಿಭಟನೆ ಮುಂದುವರಿಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಯಾಪಲದಿನ್ನಿ ಪೊಲೀಸರು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಈ ಕುರಿತು ಯಾಪಲದಿನ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.








