ಬೆಂಗಳೂರು : ಅಪ್ರಾಪ್ತೇ ಮೇಲೆ ಅತ್ಯಾಚಾರ ಎಸಗಲು ಕರೆದೊಯ್ಯುವಾಗ ಭೀಕರವಾದ ಅಪಘಾತ ಸಂಭವಿಸಿದ್ದು, ರಸ್ತೆಯ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಸ್ಥಳದಲ್ಲಿ ದುರ್ಮರಣ ಹೊಂದಿದ್ದಾಳೆ. ಬೆಂಗಳೂರಿನಲ್ಲಿ ರೋಡ್ ರೋಮಿಯೋ ಕಿರುಕುಳದಿಂದ ಅಪ್ರಾಪ್ತೆ ಬಾಲಕಿಯೊಬ್ಬಳು ಹೆಣವಾಗಿದ್ದಾಳೆ. ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.
ಲವ್ ಹೆಸರಿನಲ್ಲಿ ಅಪ್ರಾಪ್ತ ಹಿಂದೆ ಮನೋಜ್ ಎಂಬ ಯುವಕ ಬಿದ್ದಿದ್ದ ಲೈಂಗಿಕವಾಗಿ ಬಳಸಿಕೊಳ್ಳಲು ಗ್ಯಾಂಗ್ ಒಂದು ಆಕೆಯನ್ನು ಕರೆದೊಯ್ಯುತ್ತಿತ್ತು. ಬೈಕ್ ನಲ್ಲಿ ಕರೆದೋಯ್ಯುವಾಗ ಅಪಘಾತ ಸಂಭವಿಸಿ ಅಪ್ರಾಪ್ತೆ ಸಾವನ್ನಪ್ಪಿದ್ದಾಳೆ. ಲೈಂಗಿಕವಾಗಿ ಬಳಸಿಕೊಳ್ಳಲು ಆಕೆಯನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗುವಾಗ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಸಾವನ್ನಪ್ಪಿದ್ದಾಳೆ.
9ನೇ ತರಗತಿ ಓದುತ್ತಿದ್ದ ಬಾಲಕಿಯ ಹಿಂದೆ ಮನೋಜ್ ಹಿಂದೆ ಬಿದ್ದಿದ್ದ ಪದೇ ಪದೇ ಕರೆ ಮಾಡಿ ಪ್ರೀತಿಸುವಂತೆ ಪೀಡಿಸುತ್ತಿದ್ದ. ಅಕ್ಟೋಬರ್ 24ರಂದು ಮನೋಜ್ ಕರೆದುಕೊಂಡು ಹೋಗಿದ್ದಾನೆ ಎರಡು ಬೈಕ್ಗಳಲ್ಲಿ ಹೊಸಕೋಟೆ ಮಾರ್ಗವಾಗಿ ಕರೆದುಕೊಂಡು ಹೋಗಿದ್ದಾನೆ. ಬಾಲಕಿ ಮನೋಜ್ ಮತ್ತು ಮತ್ತೋರ್ವ ಒಂದು ಬೈಕ್ನಲ್ಲಿ ಪ್ರಯಾಣ ಮಾಡಿದ್ದಾರೆ. ಮತ್ತಿಬ್ಬರು ಆರೋಪಿಗಳು ಮತ್ತೊಂದು ಬೈಕ್ನಲ್ಲಿ ಪ್ರಯಾಣಿಸಿದ್ದಾರೆ.
ಹೊಸಕೋಟೆಯ ಬಳಿ ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದಿದೆ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಹೊಸಕೋಟೆ ಪೊಲೀಸರಿಂದ ಬಾಲಕಿ ಪೋಷಕರಿಗೆ ಕರೆ ಮಾಡಿದ್ದು ಬಲವಂತವಾಗಿ ಮಗಳನ್ನು ಕರೆದೊಯ್ದಿರುವ ಆರೋಪ ಕೇಳಿ ಬಂದಿದ್ದು, ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನ ಮಾಡಲಾಗಿದೆ ಎಂದು ಮನೋಜ್ ಮತ್ತು ಗ್ಯಾಂಗ್ ವಿರುದ್ಧ ಪೋಷಕರು ದೂರು ಕೊಟ್ಟಿದ್ದಾರೆ . ಅದರಲ್ಲಿ ಓರ್ವ ಬಾಲಾಪರಧಿ ಸೇರಿ ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳನ್ನು ಬಂಧಿಸಿ ಪೊಲೀಸರು ಜೈಲಿಗೆ ಹಾಕಿದ್ದಾರೆ.








