ಹಾಸನ : ಇತ್ತೀಚಿಗೆ ಹೃದಯಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಹೃದಯಾಘಾರದಿಂದ ಸಾವನಪುತ್ತಿದ್ದಾರೆ. ಇದೀಗ ಹಾಸನದಲ್ಲಿ ಒಂದೇ ದಿನ ಇಬ್ಬರು ಮಧ್ಯವಯಸ್ಕಿನವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಹೌದು ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಇಬ್ಬರು ಮಧ್ಯ ವಯಸ್ಕರು ಇಂದು ಬಲಿಯಾಗಿದ್ದಾರೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಮಗ್ಗೆ ಗ್ರಾಮದ ಬಳಿ ಈ ಒಂದು ಘಟನೆ ನಡೆದಿದೆ. ಮಗ್ಗೆ ಗ್ರಾಮದಿಂದ ಆಲೂರಿಗೆ ನೌಕರ ಬಿ ಆರ್ ನಾಗಪ್ಪ ಪ್ರಯಾಣಿಸುತ್ತಿದ್ದರು.
ಈ ವೇಳೆ ಬಸ್ ನಲ್ಲಿ ಹೃದಯಾಘಾತದಿಂದ ನಾಗಪ್ಪ (55) ಮೃತಪಟ್ಟಿದ್ದಾರೆ. ಇನ್ನು ಮತ್ತೊಂದು ಪ್ರಕರಣದಲ್ಲಿ ಮಾಜಿ ನಗರಸಭೆ ಸದಸ್ಯ ನೀಲಕಂಠಪ್ಪ (58) ಅವರು ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಮನೆಯಲ್ಲಿ ಹೃದಯಘಾತದಿಂದ ನೀಲಕಂಠಪ್ಪ ಸಾವನ್ನಪ್ಪಿದ್ದಾರೆ ಹಾಸನ ನಗರದ ಅರಳೆಪೇಟೆ ಬಡಾವಣೆಯಲ್ಲಿ ಈ ಒಂದು ಘಟನೆ ನಡೆದಿದೆ.